Saturday, October 11, 2025

ಸ್ಟುಡಿಯೋದಲ್ಲಿ ಕೈಚಳಕ ತೋರಿದ ಐವರು ಕಳ್ಳರು ಅಂದರ್!

ಹೊಸದಿಗಂತ ವರದಿ ಮಡಿಕೇರಿ:

ಮಡಿಕೇರಿ ನಗರದ ಸ್ಟುಡಿಯೋ ಒಂದರ ಬಾಗಿಲು ಮುರಿದು ಕಲರ್ ಪ್ರಿಂಟರ್, ಕೇಬಲ್ ಗಳನ್ನು ಕಳವು ಮಾಡಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಡಿಕೇರಿ ತಾಲೂಕಿನ ಬೇತು ಗ್ರಾಮದ ಮಹಮದ್ ಸುಹೇಲ್‌ (24), ಹೊದವಾಡದ ಮಹಮದ್ ಮುಬಶಿರ್.ಟಿ.ಹೆಚ್ (20), ವೀರಾಜಪೇಟೆ ತಾಲೂಕು ಕುಂಜಿಲ ಗ್ರಾಮದ ಮಹಮದ್ ಜೈನದ್ದೀನ್ (20) ಮಡಿಕೇರಿ ತಾಲೂಕಿನ ಕೊಳಕೇರಿಯ ಮುಜಾಮಿಲ್.ಕೆ.ಎಂ (20), ಬೇತು ಗ್ರಾಮದ ಫಯಾಜ್.ಆರ್.ಬಿ.(25) ಬಂಧಿತ ಆರೋಪಿಗಳು.

ಬಂಧಿತರಿಂದ ಪ್ರಿಂಟರ್ ಹಾಗೂ ಕೇಬಲ್’ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಡಿಕೇರಿ ನಗರದ ಕೊಹಿನೂರ್ ರಸ್ತೆಯಲ್ಲಿರುವ ಎಂ.ಎಂ.ಅಬ್ದುಲ್ ರೆಹಮಾನ್ ಎಂಬರಿಗೆ ಸೇರಿದ ಬ್ರೈಟ್ ಡಿಜಿಟಲ್ ಸ್ಟುಡಿಯೋಗೆ ಸೆ.25ರ ರಾತ್ರಿ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಕಲರ್ ಪ್ರಿಂಟರ್ ಹಾಗೂ ಕೇಬಲ್‌ಗಳನ್ನು ಕಳವು ಮಾಡಿದ್ದರು.

ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಚಂದ್ರಶೇಖರ್ ಪಿ., ಮಡಿಕೇರಿ ವೃತ್ತ ನಿರೀಕ್ಷಕ ರಾಜು.ಪಿ.ಕೆ. ನಗರ ಪಿಎಸ್ಐ ಅನ್ನಪೂರ್ಣ.ಎಸ್.ಎಸ್. ಹಾಗೂ ಸಿಬ್ಬಂದಿಗಳು ಶುಕ್ರವಾರ ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕರ.ರಾಮರಾಜನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಿ.ಪಿ.ದಿನೇಶ್ ಕುಮಾರ್ ಶ್ಲಾಘಿಸಿದ್ದಾರೆ.

error: Content is protected !!