January18, 2026
Sunday, January 18, 2026
spot_img

ರಾತ್ರಿ ಚಂದ್ರನ ಮ್ಯಾಜಿಕ್‌ ಶೋ, ನಿಮಿಷ ನಿಮಿಷಕ್ಕೂ ಕಲರ್‌ ಚೇಂಜ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿನ್ನೆ ರಾತ್ರಿ ಆಗಸದಲ್ಲಿ ಕೆಂಪು ಚಂದ್ರನ ದರುಶನವಾಗಿದೆ. ನಿಮಿಷ ನಿಮಿಷಕ್ಕೂ ಚಂದ್ರನ ಬಣ್ಣ ಬದಲಾವಣೆಯಾಗಿದ್ದು, ಚಂದಮಾಮನ ಮ್ಯಾಜಿಕ್‌ ಶೋ ಎಂದು ಮಕ್ಕಳು ಖುಷಿಪಟ್ಟಿದ್ದಾರೆ.

ಹುಣ್ಣಿಮೆಯ ದಿನದಂದು ಆಕಾಶದಲ್ಲಿ ಖಗ್ರಾಸ ರಾಹುಗ್ರಸ್ತ ಚಂದ್ರ ಗ್ರಹಣ ಸಂಭವಿಸಿದೆ. 3 ಗಂಟೆ 29 ನಿಮಿಷಗಳ ಕಾಲ ಸುದೀರ್ಘವಾಗಿ ಚಂದ್ರ ತನ್ನ ಬಣ್ಣ ಬದಲಿಸುತ್ತಾ ಸಾಗಿದನು. ಕ್ಷಣ ಕ್ಷಣಕ್ಕೂ ಇದನ್ನೆಲ್ಲ ಕಣ್ತುಂಬಿಕೊಂಡ ಜನರು ಬರಿಗಣ್ಣಿನಿಂದ ಚಂದ್ರಗ್ರಹಣವನ್ನು ನೋಡಿ ಸಂತಸ ಪಟ್ಟರು.

ಖಗ್ರಾಸ ರಾಹುಗ್ರಸ್ತ ಚಂದ್ರಗ್ರಹಣ ದಶಕಗಳಲ್ಲೇ ಅತ್ಯಂತ ದೊಡ್ಡ ಹಾಗೂ ವರ್ಷದ ಎರಡನೇ ಹಾಗೂ ಕೊನೆಯ ಭಾದ್ರಪದ ಮಾಸದ ಚಂದ್ರಗ್ರಹಣ ಇದಾಗಿತ್ತು. ಅಪರೂಪದ ವಿದ್ಯಮಾನಕ್ಕೆ ವಿವಿಧ ದೇಶಗಳ ಜೊತೆಗೆ ಭಾರತ ಕೂಡ ಸಾಕ್ಷಿಯಾಯಿತು. ದೇಶದ ವಿವಿಧ ನಗರಗಳಲ್ಲಿ ಜನರು ವೀಕ್ಷಣೆ ಮಾಡಿದರು. ಹುಣ್ಣಿಮೆಯ ರಾತ್ರಿಯಲ್ಲಿ ಆಕಾಶದಲ್ಲಿ ಬಿಳಿ ಬಣ್ಣದಲ್ಲಿ ಕಾಣಿಸುತ್ತಿದ್ದ ಶಶಿ, ನಿನ್ನೆ ಭೂಮಿತಾಯಿಯ ನೆರಳು ಹೊದ್ದು ಕೆಂಪು ಬಣ್ಣದಲ್ಲಿ ಗೋಚರಿಸಲ್ಪಟ್ಟನು.

ಭಾನುವಾರ ರಾತ್ರಿ 9.57ಕ್ಕೆ ಸರಿಯಾಗಿ ನಭೋಮಂಡಲದಲ್ಲಿ ಗ್ರಹಣ ಸ್ಪರ್ಶ ಆರಂಭವಾಯಿತು. ರಾತ್ರಿ 10 ಗಂಟೆ ವೇಳೆಗೆ ಅರ್ಧಚಂದ್ರಾಕೃತಿಯಲ್ಲಿ ಕಾಣಿಸಿಕೊಂಡ ಚಂದಿರ ಬಳಿಕ ರಾತ್ರಿ 11 ಗಂಟೆ ವೇಳೆಗೆ ನಿಧಾನಕ್ಕೆ ರಕ್ತಬಣ್ಣಕ್ಕೆ ತಿರುಗಲು ಆರಂಭಿಸಿನು. ಮಧ್ಯರಾತ್ರಿ 11.41ಕ್ಕೆ ಗ್ರಹಣದ ಮಧ್ಯಕಾಲ ಆಗಿದ್ದು ಒಂದು ನಿಮಿಷದ ಬಳಿಕ ಭಾರತದೆಲ್ಲೆಡೆ ರಾತ್ರಿ 11.42ಕ್ಕೆ ಕಡುಗೆಂಪು ಬಣ್ಣದಲ್ಲಿ ಪೂರ್ಣ ಚಂದ್ರಗ್ರಹಣ ಗೋಚರಿಸಿತು. ಮಧ್ಯ ರಾತ್ರಿ 1.27 ಸುಮಾರಿಗೆ ಗ್ರಹಣ ಮುಕ್ತಾಯವಾಯಿತು. ಖಗ್ರಾಸ ರಾಹುಗ್ರಸ್ತ ಚಂದ್ರಗ್ರಹಣ ಆಕಾಶದಲ್ಲಿ ಭಾರೀ ಕೌತುಕದೊಂದಿಗೆ ಸಂಪನ್ನವಾಯಿತು.

Must Read

error: Content is protected !!