ಇಂದಿನ ಡಿಜಿಟಲ್ ಜೀವನದಲ್ಲಿ ಬೆಳಗ್ಗಿನಿಂದ ರಾತ್ರಿ ತನಕ ಸ್ಕ್ರೀನ್ ನೋಡೋದು ನಮ್ಮ ದಿನನಿತ್ಯದ ಭಾಗವಾಗಿದೆ. ಆದರೆ ಇದೇ ಅಭ್ಯಾಸ ನಿಧಾನವಾಗಿ ಕಣ್ಣುಗಳಲ್ಲಿ ಒತ್ತಡ, ಮಂಜಾದ ದೃಷ್ಟಿ, ನೋವು ಹಾಗು ಒಣಗುವಿಕೆ ತರಬಹುದು. ಹೀಗಾಗಿ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇಂದಿನ ಅವಶ್ಯಕತೆಯಲ್ಲೊಂದಾಗಿದೆ. ಸರಿಯಾದ ಆಹಾರ, ಸರಿಯಾದ ಅಭ್ಯಾಸಗಳು ಕಣ್ಣಿನ ಬಲವನ್ನು ಹೆಚ್ಚಿಸಬಲ್ಲವು.
- ಸ್ಕ್ರೀನ್ ಬ್ರೇಕ್ ಅಗತ್ಯ: 20 ನಿಮಿಷಕ್ಕೆ ಒಮ್ಮೆ ಸ್ಕ್ರೀನ್‌ನಿಂದ ಕಣ್ಣು ಬೇರ್ಪಡಿಸಿ, 20 ಸೆಕೆಂಡ್ ದೂರದ ವಸ್ತುವನ್ನು ನೋಡಿ.
- ಕಣ್ಣು ಮಿಟುಕಿಸೋ ಅಭ್ಯಾಸ: ಹೆಚ್ಚು ಸಮಯ ಮಿಟುಕಿಸದೆ ಸ್ಕ್ರೀನ್ ನೋಡಿದರೆ ಕಣ್ಣು ಒಣಗುತ್ತದೆ. ಹಾಗಾಗಿ ನಿಯಮಿತವಾಗಿ ಮಿಟುಕಿಸಿ.
- ಪಾಲಕ್ ಸೊಪ್ಪು ತಿನ್ನಿ: ವಿಟಮಿನ್ A, C, K ಹಾಗೂ ಒಮೇಗಾ-3 ಇರುವ ಪಾಲಕ್ ಕಣ್ಣಿನ ರೆಟಿನಾ ರಕ್ಷಣೆಗೆ ಅತ್ಯುತ್ತಮ.
- ಗೆಣಸು: ವಿಟಮಿನ್ A ಮತ್ತು ಬೀಟಾ ಕ್ಯಾರೋಟಿನ್ ಸಮೃದ್ಧವಾಗಿರುವ ಇದು ಕಾರ್ನಿಯಾದ ಆರೋಗ್ಯ ಹೆಚ್ಚಿಸುತ್ತದೆ.
- ಟೊಮ್ಯಾಟೊ ಮತ್ತು ಕ್ಯಾಪ್ಸಿಕಂ: ರೆಟಿನಾಗೆ ಬಲ ನೀಡುವ ವಿಟಮಿನ್ A ಮತ್ತು C ಇವುಗಳಲ್ಲಿ ಇರುತ್ತವೆ. ಮ್ಯಾಕ್ಯುಲರ್ ಡಿಜೆನರೇಷನ್ ಅಪಾಯ ಕಡಿಮೆ ಮಾಡುತ್ತದೆ.
- ಕ್ಯಾರೆಟ್, ಬಾಳೆಹಣ್ಣು, ಅಗಸೆ ಬೀಜ, ಸಿಟ್ರಸ್ ಹಣ್ಣುಗಳು, ವಾಲ್‌ನಟ್ಸ್ ಇವುಗಳನ್ನು ನಿಯಮಿತವಾಗಿ ಸೇವಿಸಿದರೆ ಕಣ್ಣುಗಳಿಗೆ ಸ್ವಾಭಾವಿಕ ರಕ್ಷಣಾ ಕವಚ ದೊರೆಯುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

