ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ-ವೆನೆಜುವೆಲಾ ರಾಜಕೀಯ ಸಂಘರ್ಷ ಆರಂಭಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಕೆರಿಬಿಯನ್ ರಾಷ್ಟ್ರ ಕ್ಯೂಬಾಗೂ ಎಚ್ಚರಿಕೆ ನೀಡಿದ್ದು, ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳದಿದ್ದರೆ, ದ್ವೀಪರಾಷ್ಟ್ರವು ಇನ್ನು ಮುಂದೆ ತೈಲ ಅಥವಾ ಹಣವನ್ನು ಪಡೆಯುವುದಿಲ್ಲ ಎಂದು ಅಮೆರಿಕ ಅಧ್ಯಕ್ಷರು ಎಚ್ದರಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಷಿಯಲ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ‘ಕ್ಯೂಬಾ ಹಲವು ವರ್ಷಗಳಿಂದ ವೆನೆಜುವೆಲಾದಿಂದ ಹೆಚ್ಚಿನ ಪ್ರಮಾಣದ ತೈಲ ಮತ್ತು ಹಣದ ಮೇಲೆ ಬದುಕುತ್ತಿದೆ. ಕ್ಯೂಬಾ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ದ್ವೀಪ ರಾಷ್ಟ್ರವು ಇನ್ನು ಮುಂದೆ ತೈಲ ಅಥವಾ ಹಣವನ್ನು ಪಡೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಕ್ಯೂಬಾಗೆ ಇನ್ನು ಮುಂದೆ ತೈಲ ಅಥವಾ ಹಣ ಹೋಗುವುದಿಲ್ಲ.. ಶೂನ್ಯ! ತಡವಾಗುವ ಮೊದಲು ಅವರು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕೆಂದು ನಾನು ಬಲವಾಗಿ ಸೂಚಿಸುತ್ತೇನೆ. ಕ್ಯೂಬಾ ಹಲವು ವರ್ಷಗಳ ಕಾಲ ವೆನೆಜುವೆಲಾದಿಂದ ಹೆಚ್ಚಿನ ಪ್ರಮಾಣದ ತೈಲ ಮತ್ತು ಹಣದ ಮೇಲೆ ಬದುಕಿದೆ. ಇನ್ನು ಮೇಲೆ ಅದು ಸಾಧ್ಯವಿಲ್ಲ ಎಂದು ಟ್ರಂಪ್ ನೇರ ಎಚ್ಚರಿಕೆ ನೀಡಿದ್ದಾರೆ.
ಇನ್ನು ಕ್ಯೂಬಾದ ಅಧ್ಯಕ್ಷ ಮಿಗುಯೆಲ್ ಡಯಾಜ್-ಕ್ಯಾನೆಲ್ ಶನಿವಾರ ಕ್ಯೂಬಾ ರಾಜಧಾನಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮುಂದೆ ಸಾವಿರಾರು ಹವಾನಾ ನಿವಾಸಿಗಳ ರ್ಯಾಲಿಯಲ್ಲಿ ವೆನೆಜುವೆಲಾ ಮೇಲಿನ ಅಮೆರಿಕ ದಾಳಿಯನ್ನು ಖಂಡಿಸಿದ್ದರು. ವೆನೆಜುವೆಲಾಜ ಮೇಲಿನ ಸೇನಾದಾಳಿ ಮತ್ತು ಅದರ ಅಧ್ಯಕ್ಷರನ್ನು ಸೆರೆಹಿಡಿದಿದ್ದಕ್ಕಾಗಿ ಅಮೆರಿಕವನ್ನು ಖಂಡಿಸಿದ್ದರು.
ಇನ್ನು ದಕ್ಷಿಣ ಅಮೆರಿಕಾದ ದೇಶದಲ್ಲಿ ಕೆಲಸ ಮಾಡುವ ಸಾವಿರಾರು ವೈದ್ಯಕೀಯ ಸಿಬ್ಬಂದಿಗೆ ಬದಲಾಗಿ ವೆನೆಜುವೆಲಾ ಕ್ಯೂಬಾದ ಈಗಾಗಲೇ ಕೊರತೆಯಿರುವ ತೈಲ ಆಮದುಗಳಲ್ಲಿ ಸುಮಾರು 30% ಅನ್ನು ಪೂರೈಸುತ್ತದೆ. ತೈಲ ನಷ್ಟವು ಕ್ಯೂಬಾದ ಈಗಾಗಲೇ ಅಲುಗಾಡುತ್ತಿರುವ ವಿದ್ಯುತ್ ಗ್ರಿಡ್ ಮತ್ತು ಇಂಧನ ಪೂರೈಕೆಗೆ ವಿನಾಶಕಾರಿ ಹೊಡೆತವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

