Saturday, January 10, 2026

ಮಲೇಷ್ಯಾ ಓಪನ್ ಸೂಪರ್ ಬ್ಯಾಡ್ಮಿಂಟನ್: ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಪಿ.ವಿ. ಸಿಂಧು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಸ್ಟಾರ್ ಶಟ್ಲರ್ ಪಿ.ವಿ. ಸಿಂಧು ಸೆಮಿಫೈನಲ್‌ಗೆ ಮುನ್ನಡೆದರು.

ಜಪಾನ್‌ನ ಅಕಾನೆ ಯಮಗುಚಿ ಗಾಯದ ಸಮಸ್ಯೆಯಿಂದಾಗಿ ನಿವೃತ್ತಿ ಹೊಂದಿದ ಕಾರಣ ಸಿಂಧು ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟರು.

ಗಾಯದ ಸಮಸ್ಯೆಯಿಂದ ದೀರ್ಘ ಕಾಲ ವಿಶ್ರಾಂತಿ ಪಡೆದು ಮರಳಿದ ಮಾಜಿ ವಿಶ್ವ ಚಾಂಪಿಯನ್ ಸಿಂಧು, ಹಾಲಿ ವಿಶ್ವ ಚಾಂಪಿಯನ್ ಮತ್ತು ವಿಶ್ವದ ನಂ. 3 ಯಮಗುಚಿ ವಿರುದ್ಧ 21-11 ಅಂತರದಲ್ಲಿ ಮೊದಲ ಗೇಮ್ ಗೆದ್ದರು. ಆದರೆ ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಜಪಾನಿನ ಶಟ್ಲರ್ ಎರಡನೇ ಗೇಮ್‌ಗೂ ಮುನ್ನ ಪಂದ್ಯದಿಂದ ಹಿಂದೆ ಸರಿದರು. ಹೀಗಾಗಿ ಸಿಂಧು ಅವರನ್ನು ವಿಜೇತೆ ಎಂದು ತೀರ್ಮಾನಿಸಲಾಯಿತು.

ಈ ಗೆಲುವಿನಿಂದ ವಿಶ್ವದ 18 ನೇ ಶ್ರೇಯಾಂಕಿತೆ ಸಿಂಧು ಅವರ ಯಮಗುಚಿ ವಿರುದ್ಧದ ಹೆಡ್-ಟು-ಹೆಡ್ ದಾಖಲೆಯನ್ನು 15-12 ಕ್ಕೆ ಏರಿಸಿತು.

ಮುಂದಿನ ಸುತ್ತಿನಲ್ಲಿ ಆರನೇ ಶ್ರೇಯಾಂಕದ ಇಂಡೋನೇಷ್ಯಾದ ಪುತ್ರಿ ಕುಸುಮಾ ವರ್ದಾನಿ ಅಥವಾ ಎರಡನೇ ಶ್ರೇಯಾಂಕದ ಚೀನಾದ ವಾಂಗ್ ಝಿ ಯಿ ಅವರನ್ನು ಎದುರಿಸಲಿದ್ದಾರೆ.

error: Content is protected !!