Wednesday, November 5, 2025

ಎಸ್‌ಐಆರ್‌ ವಿರೋಧಿಸಿ ಬಂಗಾಳದಲ್ಲಿ ಬೀದಿಗಿಳಿದ ಮಮತಾ ಬ್ಯಾನರ್ಜಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ಇಂದಿನಿಂದ ಮತಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಆರಂಭವಾಗಿದ್ದು, ಆದ್ರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧಿಸಿದ್ದು, ಮಂಗಳವಾರ ಕೋಲ್ಕತ್ತಾದ ಬೀದಿಗಿಳಿದು ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು.

ಈ ಪರಿಷ್ಕರಣಾ ಅಭಿಯಾನವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಚುನಾವಣಾ ಆಯೋಗದೊಂದಿಗೆ ಶಾಮೀಲಾಗಿ ನಡೆಸುತ್ತಿರುವ ʻಮೌನ, ಅಪಾರದರ್ಶಿಕ ಮೋಸʼ ಎಂದು ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

ತಮ್ಮ ಸೋದರಳಿಯ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ, ಸಿಎಂ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾದ ಹೃದಯ ಭಾಗದಲ್ಲಿ ಪ್ರತಿಭಟನೆ ನಡೆಸಿದರು. ರೆಡ್ ರೋಡ್‌ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯಿಂದ ಆರಂಭವಾದ 3.8 ಕಿ.ಮೀ. ಉದ್ದದ ಈ ಪಾದಯಾತ್ರೆಯು ರವೀಂದ್ರನಾಥ ಠಾಗೋರ್ ಅವರ ಪೂರ್ವಜರ ನಿವಾಸವಾದ ಜೊರಾಸಾಂಕೊ ಠಾಕೂರ್ ಬಳಿ ಮುಕ್ತಾಯಗೊಂಡಿತು.

ರ‍್ಯಾಲಿ ಮಾರ್ಗದುದ್ದಕ್ಕೂ ಟಿಎಂಸಿ ಕಾರ್ಯಕರ್ತರು ಮತ್ತು ಬೆಂಬಲಿಗರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಎಸ್‌ಐಆರ್‌ ಪ್ರಕ್ರಿಯೆಯನ್ನು ಖಂಡಿಸುವ ಫಲಕಗಳನ್ನು ಹಿಡಿದು ಸಾಗಿದರು. ಬಂಗಾಳ

ಮಮತಾ ಬ್ಯಾನರ್ಜಿ ಅವರು ನಡೆಸಿದ ಪ್ರತಿಭಟನೆಯನ್ನು ಜಮಾತ್‌ನ ರ‍್ಯಾಲಿ ಎಂದು ಬಿಜೆಪಿ ತೀಕ್ಷ್ಣವಾಗಿ ಟೀಕಿಸಿದೆ. ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಭಾರತೀಯ ಸಂವಿಧಾನದ ನೀತಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

error: Content is protected !!