ಹೊಸದಿಗಂತ ವರದಿ ಬೆಳಗಾವಿ :
ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬನಿಗೆ ನಗರದ ಪೊಕ್ಸೋ ನ್ಯಾಯಾಲಯ 30 ವರ್ಷಗಳ ಕಠಿಣ ಕಾರಾಗ್ರಹ ಶಿಕ್ಷೆ ಬುಧವಾರ ವಿಧಿಸಿದೆ.
ಬೆಳಗಾವಿಯ ಸಮರ್ಥ ನಗರದ ವಿಶಾಲ ಭೈರಪ್ಪ ಹೊಸಮನಿ (22) ಎಂಬಾತನ ವಿರುದ್ಧ ಕಳೆದ 2024ರಲ್ಲಿ ನಗರದ ಮಾರ್ಕೇಟ್ ಠಾಣೆಯಲ್ಲಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ದಾಖಲಾಗಿತ್ತು.
ಆರೋಪಿ ವಿಶಾಲ ಬಾಲಕಿ ಮೇಲೆ ಪುಸಲಾಯಿಸಿ ಅತ್ಯಾಚಾರ ಎಸಗಿದ್ದ ಪ್ರಕರಣವನ್ನು ಅಂದಿನ ಮಾರ್ಕೇಟ್ ಠಾಣೆ ಪೊಲೀಸ್ ಇನ್ಸಪೆಕ್ಟರ್ ಮಹಾಂತೇಷ ದ್ಯಾಮನ್ನವರ ಸವಿವರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ನ್ಯಾಯಾಲಯ ಬುಧವಾರ ಆರೋಪಿಗೆ 30ವರ್ಷಗಳ ಕಠಿಣ ಶಿಕ್ಷೆ ಪ್ರಕಟಿಸಿದೆ. ನೊಂದ ಬಾಲಕಿಗೆ ನಾಲ್ಕು ಲಕ್ಷ ಪರಿಹಾರ ಬಿಡುಗಡೆಯಾಗಿದೆ.


