Tuesday, October 28, 2025

ಮಂಧನಾ, ರಾವಲ್ ಸ್ಫೋಟಕ ಶತಕ: ನ್ಯೂಜಿಲೆಂಡ್‌ ಗೆಲುವಿಗೆ ಬಿಗ್ ಟಾರ್ಗೆಟ್ ನೀಡಿದ ಭಾರತ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, 340 ರನ್ ಸಿಡಿಸಿದೆ. ಸ್ಮೃತಿ ಮಂಧನಾ ಹಾಗೂ ಪ್ರತೀಕಾ ರಾವಲ್ ಸ್ಫೋಟಕ ಶತಕ ಸಾಧನೆ ಮಾಡು ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಮಳೆಯಿಂದ ಪಂದ್ಯ ಸ್ಥಗಿತಗೊಂಡಿದ್ದ ಕಾರಣ ಪಂದ್ಯವನ್ನು 49 ಓವರ್‌ಗೆ ಸೀಮಿತಗೊಳಿಸಲಾಗಿದೆ.

ಪ್ರತೀಕಾ ರಾವಲ್ 122 ರನ್ ಸಿಡಿಸಿದರೆ, ಸ್ಮೃತಿ ಮಂಧನಾ 109 ರನ್ ಸಿಡಿಸಿದರು. ಆರಂಭಿಕರ ವಿಕೆಟ್ ಪತನದ ಬಳಿಕ ಜ್ಯಾಮಿ ರೋಡಿಗ್ರಸ್ ಹಾಗೂ ಹರ್ಮನ್‌ಪ್ರೀತ್ ಕೌರ್ ಅಬ್ಬರ ಆರಂಭಗೊಂಡಿತು. ಜ್ಯಾಮಿ ರೋಡಿಗ್ರಸ್ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. 48 ಓವರ್ ಮುಕ್ತಾಯದ ವೇಳೆಗೆ ಭಾರತ ಮಹಿಳಾ ತಂಡ 2 ವಿಕೆಟ್ ಕಳೆದುಕೊಂಡು 329 ರನ್ ಸಿಡಿಸಿತ್ತು. ಈ ವೇಳೆ ಸುರಿದ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತು.

ಒಂದು ಓವರ್‌ಗಾಗಿ ಪಂದ್ಯ ಮತ್ತೆ ಆರಂಭಗೊಂಡಿತು. ಹರ್ಮನ್‌ಪ್ರೀತ್ 10 ರನ್ ಸಿಡಿಸಿ ಔಟಾದರು. ಇತ್ತ ರೋಡಿಗ್ರಿಸ್ ಅಜೇಯ 76 ರನ್ ಸಿಡಿಸಿದರು.ಈ ಮೂಲಕ ಭಾರತ ಮಹಿಳಾ ತಂಡ 49 ಓವರ್‌ಲ್ಲಿ 3 ವಿಕೆಟ್ ಕಳೆದುಕೊಂಡು 340 ರನ್ ಸಿಡಿಸಿತು.

error: Content is protected !!