January16, 2026
Friday, January 16, 2026
spot_img

ಕೂರ್ಗ್‌ ಬೇರ್‌ಫೂಟ್ ಮ್ಯಾರಥಾನ್ ಗೆ ಮಂಗಳೂರು ರನ್ನರ್ಸ್ ಕ್ಲಬ್ ಸಾಥ್!

ಹೊಸದಿಗಂತ ವರದಿ, ಮಂಗಳೂರು:

ದಿ ಕೂರ್ಗ್ ವೆಲ್ನೆಸ್ ಫೌಂಡೇಶನ್ ಮತ್ತು ಮಿಲಿಂದ್ ಸೋಮನ್ ಜಂಟಿ ಆಶ್ರಯದಲ್ಲಿ ಡಿ.೭ರಂದು ಹಮ್ಮಿಕೊಳ್ಳಲಾಗಿರುವ ಬೇರ್‌ಫೂಟ್ ಮ್ಯಾರಥಾನ್ ಕೂರ್ಗ್ ಪ್ರಚಾರಾರ್ಥ ಮಂಗಳೂರು ರನ್ನರ್ಸ್ ಕ್ಲಬ್ ನೇತೃತ್ವದಲ್ಲಿ ಭಾನುವಾರ ಓಟ ಹಮ್ಮಿಕೊಳ್ಳಲಾಯಿತು.

ಏಕತೆ ಹಾಗೂ ಪ್ರಕೃತಿಯ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ೨೦೧೪ರಲ್ಲಿ ಆರಂಭವಾದ ಬರಿಗಾಲಿನ ಈ ಮ್ಯಾರಥಾನ್ ಈಗ ೧೯ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಬಾರಿ ಪೊಲ್ಲಿಬೆಟ್ಟದ ಟಾಟಾ ಕಾಫಿ ಸ್ಪೋರ್ಟ್ಸ್ ಮೈದಾನದಲ್ಲಿ ಇದನ್ನು ಹಮ್ಮಿಕೊಳ್ಳಲಾಗಿದ್ದು, ಇದರ ನೋಂದಣಿಯಿಂದ ಬರುವ ಎಲ್ಲಾ ಹಣವನ್ನು ಕೂರ್ಗ್ ವೆಲ್ನೆಸ್ ಫೌಂಡೇಶನ್ ಮೂಲಕ ಕೊಡಗಿನ ಸ್ವಾಸ್ಥ್ಯ ಹಾಗೂ ಜನತೆ, ಅಲ್ಲಿನ ಪರಿಸರ ವ್ಯವಸ್ಥೆಗೆ ನೀಡಲಾಗುತ್ತಿರುವುದು ವಿಶೇಷ.



ಮಂಗಳೂರು ರನ್ನರ್ಸ್ ಕ್ಲಬ್ ಸದಸ್ಯರು ಈ ಮ್ಯಾರಥಾನ್‌ಗೆ ಸಾಥ್ ನೀಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

Must Read

error: Content is protected !!