Thursday, November 13, 2025

FOOD | ಮಂಗಳೂರು ಸ್ಟೈಲ್ ಹುರುಳಿ ಚಟ್ನಿ: ಸಾಂಪ್ರದಾಯಿಕ ರುಚಿಯ ಸ್ಪೆಷಲ್ ಸೈಡ್ ಡಿಶ್!

ಮಂಗಳೂರು ಪ್ರದೇಶದ ಊಟದ ರುಚಿ ಅದರ ವಿಶಿಷ್ಟ ಚಟ್ನಿಗಳಲ್ಲಿದೆ. ಅದರಲ್ಲೂ “ಹುರುಳಿ ಚಟ್ನಿ” ಎಂದರೆ ಊಟಕ್ಕೆ ಹೊಸ ರುಚಿ ನೀಡುವ ಅತ್ಯಂತ ಜನಪ್ರಿಯ ಸೈಡ್ ಡಿಶ್. ಈ ಚಟ್ನಿಯು ಕಡಿಮೆ ಪದಾರ್ಥಗಳಿಂದ ತಯಾರಾದರೂ ರುಚಿಯಲ್ಲಿ ಅಪ್ರತಿಮವಾಗಿರುತ್ತದೆ. ಇದನ್ನು ಇಡ್ಲಿ, ದೋಸೆ, ಅಥವಾ ಬಿಸಿ ಅನ್ನದ ಜೊತೆಗೆ ತಿಂದರೆ ಅದ್ಭುತ ರುಚಿ ನೀಡುತ್ತದೆ.

ಅಗತ್ಯವಿರುವ ಸಾಮಗ್ರಿಗಳು:

ಹುರುಳಿ (ಹುರುಳಿ ಕಾಳು) – ½ ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಬೆಳ್ಳುಳ್ಳಿ – 3 ಕಾಳು
ಹಸಿ ಮೆಣಸಿನಕಾಯಿ – 3
ತೆಂಗಿನ ತುರಿ – ½ ಕಪ್
ಹುಣಸೆಹಣ್ಣು – ಸಣ್ಣ ತುಂಡು
ಎಣ್ಣೆ – 1 ಟೀ ಸ್ಪೂನ್
ಸಾಸಿವೆ, ಕರಿಬೇವು – ಒಗ್ಗರಣೆಗೆ

ತಯಾರಿಸುವ ವಿಧಾನ:

ಮೊದಲು ಹುರುಳಿಯನ್ನು ಹುರಿದುಕೊಂಡು, ತಣ್ಣೀರಿನಲ್ಲಿ ಹಾಕಿ ನೆನೆಸಿಡಿ.

ಬಿಸಿ ಪ್ಯಾನಿನಲ್ಲಿ ಎಣ್ಣೆ ಹಾಕಿ, ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನು ಹಾಕಿ ಸ್ವಲ್ಪ ಬಾಡಿಸಿ. ನಂತರ ತೆಂಗಿನ ತುರಿ, ಹುಣಸೆಹಣ್ಣು, ಉಪ್ಪು ಹಾಗೂ ನೆನೆಸಿದ ಹುರುಳಿ ಸೇರಿಸಿ ಮಿಕ್ಸಿಯಲ್ಲಿ ಹಾಕಿ ನಯವಾಗಿ ರುಬ್ಬಿ.

ನಂತರ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಕೊಟ್ಟರೆ ರುಚಿಯಾದ ಹುರುಳಿ ಚೆಟ್ನಿ ರೆಡಿ.

error: Content is protected !!