Monday, December 22, 2025

ಬೆಂಗಳೂರಿನ ಮಂತ್ರಿ ಮಾಲ್‌ನಿಂದ ಐದು ಕೋಟಿ ರೂ. ತೆರಿಗೆ ಪಾವತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿ ಅಭಿಯಾನ ನಡೆಯುತ್ತಿದ್ದು, ಅಭಿಯಾನದ ಭಾಗವಾಗಿ ಮಂತ್ರಿ ಮಾಲ್ ನಿಂದ 5 ಕೋಟಿ ರೂ.ಗಳನ್ನು ವಸೂಲಿ ಮಾಡಿದೆ.

ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ರವರು ಶುಕ್ರವಾರ ಬೆಳಿಗ್ಗೆಯಿಂದ ಚಿಕ್ಕಪೇಟೆಯಲ್ಲಿ ನಡೆಯುತ್ತಿರುವ ಆಸ್ತಿ ತೆರಿಗೆ ಪಾವತಿ ಪರಿಶೀಲನೆ ಕಾರ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನ್ಯಾಯಾಲಯದ ಆದೇಶದಂತೆ ಮಂತ್ರಿ ಮಾಲ್, ಬೆಂಗಳೂರು ಕೇಂದ್ರ ನಗರಪಾಲಿಕೆಗೆ ಕಟ್ಟಬೇಕಾಗಿರುವ ಬಾಕಿ ಮೊತ್ತದಲ್ಲಿ ರೂ. 5 ಕೋಟಿ ರೂ. ಚೆಕ್‌ನ್ನು ಆಯುಕ್ತರಾದ ರಾಜೇಂದ್ರ ಚೋಳನ್ ರವರಿಗೆ ನೀಡಿದರು.

error: Content is protected !!