April 11, 2026
Saturday, April 11, 2026
spot_img

ತೆಲಂಗಾಣ ಪೊಲೀಸರ ಮುಂದೆ ಮಾವೋವಾದಿ ಕಮಾಂಡರ್ ದೇವ್‌ಜಿ ಶರಣು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಲೆಗೆ 1 ಕೋಟಿ ರೂ. ಬಹುಮಾನವನ್ನು ಘೋಷಿಸಲಾಗಿದ್ದ ಉನ್ನತ ಮಾವೋವಾದಿ ಕಮಾಂಡರ್ ‘ತಂತ್ರಜ್ಞ’ ತಿಪ್ಪಿರಿ ತಿರುಪತಿ ಅಲಿಯಾಸ್ ದೇವ್‌ಜಿ ತೆಲಂಗಾಣ ಪೊಲೀಸರ ಮುಂದೆ ಶರಣಾಗಿದ್ದಾನೆ.

ದೇವ್‌ಜಿ ಜೊತೆ ಮತ್ತೊಬ್ಬ ಹಿರಿಯ ಮಾವೋವಾದಿ ನಾಯಕ ಮಲ್ಲ ರಾಜಿ ರೆಡ್ಡಿ ಮತ್ತು ಹಲವಾರು ಕಾರ್ಯಕರ್ತರು ಸಹ ಶರಣಾಗಿದ್ದಾರೆ.

ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯವರಾಗಿದ್ದ ದೇವ್‌ಜಿ , ಮೇ 2025 ರಲ್ಲಿ ನಿಧನರಾಗಿದ್ದ ಮಾವೋವಾದಿ ಪ್ರಧಾನ ಕಾರ್ಯದರ್ಶಿ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಎಂಬವರ ಉತ್ತರಾಧಿಕಾರಿಯಾಗಿದ್ದನು.

ಈ ಕುರಿತು ಮಾಹಿತಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು, ಒಂದೆರಡು ದಿನಗಳಲ್ಲಿ ಶರಣಾಗತಿಯಾದವರು ಅಧಿಕೃತವಾಗಿ ತೋರಿಸಲಾಗುವುದು. ಸದ್ಯ ತೆಲಂಗಾಣ ಪೊಲೀಸರ ವಶಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !