ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ನಟ ಅಜಯ್ ರಾವ್ ಹಾಗೂ ಪತ್ನಿ ಸ್ವಪ್ನ ರಾವ್ ಮಧ್ಯೆ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಇಂದು ಬಿರುಗಾಳಿಯಂತೆ ಸುಳಿದಾಡಿದೆ. 2014ರಲ್ಲಿ ಪ್ರೀತಿಸಿ ಮದುವೆ ಆಗಿದ್ದ ಈ ಜೋಡಿ ಇದೀಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿತ್ತು.
ಆದರೆ, ಈ ಬಗ್ಗೆ ಸ್ಪಷ್ಟತೆ ಕೊಡುವ ಬದಲು ನಟ ಅಜಯ್ ರಾವ್ ಅವರು ಮಾಧ್ಯಮಗಳಿಗೆ ಹೊರಬಿದ್ದ ಸುದ್ದಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
‘ಇದು ನನ್ನ ಪರ್ಸನಲ್ ವಿಷ್ಯ, ನಾವು ಇದನ್ನ ಸಾಲ್ವ್ ಮಾಡಿಕೊಳ್ತೀವಿ.. ನಾನು ನನ್ನದೇ ಅದ ಡಿಗ್ನಿಫ್ಯ್ಡ್ ರೀತಿಯಲ್ಲಿ ಇದನ್ನ ಹ್ಯಾಂಡಲ್ ಮಾಡಿ ಸಾಲ್ವ್ ಮಾಡಿಕೊಳ್ತೀನಿ. ನಾನು ಈಗ ಈ ಬಗ್ಗೆ ರಿಯಾಕ್ಟ್ ಮಾಡಿ ನನ್ನ ಮಗಳ ಭವಿಷ್ಯಕ್ಕೆ ಇದು ತೊಂದರೆ ಆಗೋದು ಬೇಡ. ನಮ್ಮ ಪ್ರೈವಸಿಯನ್ನ ಗೌರವಿಸಿ’ ಎಂದು ಅಜಯ್ ರಾವ್ ಹೇಳಿದ್ದಾರೆ. ಈ ಮೂಲಕ ಅವರು ಸುದ್ದಿಯನ್ನು ಅಲ್ಲಗಳೆಯದೇ, ದಯವಿಟ್ಟು ಇಲ್ಲಿಗೇ ನಿಲ್ಲಿಸಿಬಿಡಿ’ ಎಂದು ವಿನಂತಿಸಿಕೊಂಡಿದ್ದಾರೆ.