February 26, 2026
Thursday, February 26, 2026
spot_img

ಜಿಯೋ ‘ಆದಾಯ’ದ ವೇಗಕ್ಕೆ ಬೆರಗಾದ ಮಾರುಕಟ್ಟೆ: ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋದ್ದೇ ಸಿಂಹಪಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ (Q3FY26) ಕುರಿತು ಐಸಿಐಸಿಐ ಸೆಕ್ಯೂರಿಟೀಸ್ ಮತ್ತು ಸಿಎಲ್ಎಸ್ಎ ನೀಡಿರುವ ವರದಿಗಳು, ಜಿಯೋ ತನ್ನ ಪ್ರತಿಸ್ಪರ್ಧಿಗಳಿಗಿಂತ ಬಹುದೂರ ಮುಂದಿರುವುದನ್ನು ಪುಷ್ಠೀಕರಿಸಿವೆ.

ದೇಶದ ಪ್ರಮುಖ ಮೂರು ಖಾಸಗಿ ಟೆಲಿಕಾಂ ಸಂಸ್ಥೆಗಳ (ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ) ಒಟ್ಟು ಹೊಂದಾಣಿಕೆಯ ಒಟ್ಟು ಆದಾಯ (AGR) ಈ ಅವಧಿಯಲ್ಲಿ 72,000 ಕೋಟಿ ರೂಪಾಯಿ ತಲುಪಿದೆ. ಇದರಲ್ಲಿ ರಿಲಯನ್ಸ್ ಜಿಯೋ ಸಿಂಹಪಾಲು ಹೊಂದಿದ್ದು, 32,000 ಕೋಟಿ ರೂಪಾಯಿ ಆದಾಯ ಗಳಿಸಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 11.2 ರಷ್ಟು ಭರ್ಜರಿ ಬೆಳವಣಿಗೆಯಾಗಿದೆ.

ವರದಿಯ ಪ್ರಕಾರ, ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ತನ್ನ ಪಾಲನ್ನು ಶೇ. 43ಕ್ಕೆ ಏರಿಸಿಕೊಂಡಿದೆ.

ಉಳಿದಂತೆ ಭಾರ್ತಿ ಏರ್‌ಟೆಲ್ 29,900 ಕೋಟಿ ರೂ. ಆದಾಯದೊಂದಿಗೆ ಶೇ. 39.9 ರಷ್ಟು ಪಾಲು ಹೊಂದಿದೆ. ವೊಡಾಫೋನ್ ಐಡಿಯಾ 9,900 ಕೋಟಿ ರೂ. ಆದಾಯದೊಂದಿಗೆ ಕೇವಲ ಶೇ. 13 ರಷ್ಟು ಪಾಲು ಹೊಂದಿದ್ದು, ಕುಸಿತವನ್ನು ಅನುಭವಿಸುತ್ತಿದೆ.

ಕರ್ನಾಟಕ ಸೇರಿದಂತೆ ದೇಶದ 16 ಪ್ರಮುಖ ವಲಯಗಳಲ್ಲಿ ಜಿಯೋ ತನ್ನ ಮಾರುಕಟ್ಟೆ ಪಾಲನ್ನು ವಿಸ್ತರಿಸಿದೆ. ವಿಶೇಷವಾಗಿ ಗುಜರಾತ್, ಉತ್ತರಪ್ರದೇಶ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಕಂಪನಿ ಉತ್ತಮ ಪ್ರಗತಿ ಸಾಧಿಸಿದೆ. ಇನ್ನು ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಂತಹ ಮೆಟ್ರೋ ನಗರಗಳಲ್ಲಿಯೂ ಜಿಯೋ ಬಳಕೆದಾರರ ಸಂಖ್ಯೆ ಮತ್ತು ಆದಾಯ ಗಣನೀಯವಾಗಿ ಹೆಚ್ಚಾಗಿದೆ.

ಸಿಎಲ್ಎಸ್ಎ ವರದಿಯ ಪ್ರಕಾರ, ಜಿಯೋ ತನ್ನ ಮಾರುಕಟ್ಟೆ ಪಾಲನ್ನು ಬಲಪಡಿಸಿಕೊಳ್ಳುತ್ತಾ ಮುನ್ನಡೆಯುತ್ತಿದ್ದರೆ, ಏರ್‌ಟೆಲ್ ಸ್ಥಿರವಾದ ಬೆಳವಣಿಗೆ ದಾಖಲಿಸಿದೆ. ಆದರೆ ವೊಡಾಫೋನ್ ಐಡಿಯಾ ಕಳೆದ 12 ತಿಂಗಳುಗಳಿಂದ ಸತತ ಹಿನ್ನಡೆ ಅನುಭವಿಸುತ್ತಿರುವುದು ವರದಿಯಿಂದ ತಿಳಿದುಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !