ಹೊಸದಿಗಂತ ವರದಿ ಬೆಳಗಾವಿ :
ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿರುವ ಮಲಪ್ರಭಾ ನದಿಗೆ ಹಾರಿ, ವಿವಾಹಿತ ಯುವಕ ಮತ್ತು ಆತನ ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬುಧುವಾರ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವುದರಿಂದ ತಾಲೂಕಿನಾಧ್ಯಂತ ಆಂತಕದ ವಾರಾವರಣ ನಿರ್ಮಾಣ ವಾಗಿದೆ. ಮಲ್ಲಾಪುರ ಗ್ರಾಮದ ಜಗದೀಶ ಯಲ್ಲಪ್ಪ ಕವಳೇಕರ(27), ಗಂಗಮ್ಮಾ ತ್ಯಾಪಿ(25) ಮೃತ ದುರ್ದೈವಿಗಳು.
ಎರಡನೇ ಮದುವೆಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿರುವುದರಿಂದ ಪ್ರಿಯತಮೆಯೊಂದಿಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಾಹಿತ ಯುವಕನ ಹೆಂಡತಿ ಪ್ರಥಮ ಹೆರಿಗೆಗಾಗಿ ತವರುಮನೆ ಬೋಚಬಾಳ ಗ್ರಾಮಕ್ಕೆ ತೆರಳಿದ್ದಳು. ಆಕೆ ಬಂದ ನಂತರ ಎರಡನೇಯ ಮದುವೆಯ ವಿಚಾರಕ್ಕೆ ಇತ್ಯರ್ಥ ಕಂಡುಕೊಳ್ಳೋಣ ಎಂದು ಮನೆಯವರು ಆಕ್ಷೇಪ ವ್ಯಕ್ತಪಡಿಸಿದಾಗ ಮಾತಿಗೆ ಮಾತು ಬೆಳೆದಿತ್ತು ಎನ್ನಲಾಗುತ್ತಿದೆ.
ಸೋಮವಾರ ತವರು ಮನೆ ತೊರೆದ ಇಬ್ಬರೂ ಬುಧವಾರ ಬೆಳಿಗ್ಗೆ ಮಲಪ್ರಭಾ ನದಿಯಲ್ಲಿ ಶವವಾಗಿದ್ದಾರೆ. ಮೃತರಾದ ಜಗದೀಶ ಮತ್ತು ಗಂಗಮ್ಮಾ ಇಬ್ಬರು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ, ಮನೆಯಲ್ಲಿ ಮದುವೆಗೆ ಕುಟುಂಬಸ್ಥರು ಒಪ್ಪಿರಲಿಲ್ಲ. ಹಾಗಾಗಿ, ಒಂದು ವರ್ಷದ ಹಿಂದೆಯಷ್ಟೇ ಬೇರೆ ಯುವತಿ ಜೊತೆಗೆ ಜಗದೀಶ ಮದುವೆ ಆಗಿತ್ತು.
ಘಟನಾ ಸ್ಥಳಕ್ಕೆ ರಾಮದುರ್ಗ ಪೊಲೀಸರು ಹಾಗೂ ಅಗ್ನಿ ಶಾಂಕ ದಳ ಆಗಮಿಸಿ ಪರಿಶೀಲನೆ ನಡೆಸಿ, ಎರಡು ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ಇಬ್ಬರೂ ಅಪ್ಪಿಕೊಂಡು ನೀರಿಗೆ ಬಿದ್ದಿದ್ದು, ಶವವಾಗಿಯೂ ಅಪ್ಪಿಕೊಂಡೆಯೇ ಇದ್ದರು. ಹಾಗೆಯೇ ಹೊರ ತೆಗೆದ ವೇಳೆ ಅಲ್ಲಿದ್ದ ಜನರನ್ನು ಒಂದು ಕ್ಷಣ ಮೌನವಾಗಿಸಿತು.
ಈ ಪ್ರಕರಣದ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದೆ ವರೆಸಿದ್ದಾರೆ.



