March 14, 2026
Saturday, March 14, 2026
spot_img

ವೈಯರ್‌ನಿಂದ ಕತ್ತು ಬಿಗಿದು ಲಿವ್ ಇನ್ ಸಂಗಾತಿಯ ಹ*ತ್ಯೆ: ವಿವಾಹಿತ ಅಂದರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಿವ್ ಇನ್ ಸಂಬಂಧದಲ್ಲಿದ್ದ ಯುವತಿಯನ್ನು ವೈಯರ್‌ನಿಂದ ಕತ್ತು ಬಿಗಿದು ಹತ್ಯೆ ಮಾಡಿದ ಘಟನೆ ಬೆಂಗಳೂರು ನಗರದ ವರ್ತೂರು ಪ್ರದೇಶದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೃತ ಯುವತಿಯನ್ನು ರಂಜಿತಾ (23) ಎಂದು ಗುರುತಿಸಲಾಗಿದೆ.

ರಂಜಿತಾ ಕೊಡಗು ಮೂಲದವರಾಗಿದ್ದು, ಆರೋಪಿಯಾದ ಅಯ್ಯಪ್ಪನ ಜೊತೆ ಲಿವ್ ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಆರಂಭದಲ್ಲಿ ಇಬ್ಬರ ನಡುವೆ ಸ್ನೇಹವಾಗಿ ಆರಂಭವಾದ ಸಂಬಂಧ ಬಳಿಕ ಒಟ್ಟಿಗೆ ವಾಸಿಸುವ ಮಟ್ಟಿಗೆ ಮುಂದುವರಿದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ:

ಆದರೆ ಅಯ್ಯಪ್ಪ ಈಗಾಗಲೇ ವಿವಾಹಿತನಾಗಿದ್ದ ವಿಷಯ ರಂಜಿತಾಳಿಗೆ ತಿಳಿದಿರಲಿಲ್ಲ. ನಂತರ ಈ ಸಂಗತಿ ಬಹಿರಂಗವಾದ ಬಳಿಕ ಇಬ್ಬರ ನಡುವೆ ನಿರಂತರ ಕಲಹ ಆರಂಭವಾಗಿತ್ತು. ಈ ವಿಚಾರವೇ ಕೊನೆಗೆ ಗಂಭೀರ ಜಗಳಕ್ಕೆ ಕಾರಣವಾದುದಾಗಿ ಹೇಳಲಾಗಿದೆ.

ಜಗಳ ತೀವ್ರಗೊಂಡ ಸಂದರ್ಭದಲ್ಲಿ ಕೋಪಗೊಂಡ ಅಯ್ಯಪ್ಪ ವೈಯರ್ ಬಳಸಿ ರಂಜಿತಾಳ ಕತ್ತು ಬಿಗಿದು ಹತ್ಯೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಘಟನೆ ನಂತರ ಮಾಹಿತಿ ಪಡೆದ ವರ್ತೂರು ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !