Wednesday, October 29, 2025

ಮೊರಾದಾಬಾದ್​ನ ರೆಸ್ಟೋರೆಂಟ್​​ನಲ್ಲಿ ಭೀಕರ ಅಗ್ನಿ ಅವಘಡ: ವ್ಯಕ್ತಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಪ್ರದೇಶದ ಮೊರಾದಾಬಾದ್​ನ ರೆಸ್ಟೋರೆಂಟ್​ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಬೆಂಕಿಯ ಪರಿಣಾಮವಾಗಿ ನಾಲ್ಕು ಸಿಲಿಂಡರ್‌ಗಳು ಸ್ಫೋಟಗೊಂಡಿದ್ದು, ಬೆಂಕಿ ರೆಸ್ಟೋರೆಂಟ್​ನ ಇತರ ಮಹಡಿಗಳಿಗೂ ಹರಡಿದೆ. ಮೃತರನ್ನು 56 ವರ್ಷದ ಮಾಯಾ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ.

ಅಧಿಕಾರಿಗಳ ಪ್ರಕಾರ, ಭಾನುವಾರ ರಾತ್ರಿ 10 ಗಂಟೆಗೆ ಬೆಂಕಿಯ ಬಗ್ಗೆ ಅವರಿಗೆ ಕರೆ ಬಂದಿತ್ತು.ನಂತರ ಎರಡು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಯಿತು.ಬೆಂಕಿ ಇತರ ಮಹಡಿಗಳಿಗೆ ಹರಡಿತು, ಇದರಿಂದಾಗಿ ಹಲವಾರು ಜನರು ಸಿಲುಕಿಕೊಂಡರು. ಅವರಲ್ಲಿ ನಾಲ್ವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 16 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಘಟನೆಗೆ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

error: Content is protected !!