ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರುಣಾಚಲ ಪ್ರದೇಶದ ಪಾಸಿಘಾಟ್‌ನ ಮೆಬೊ ಮತ್ತು ಸಿಗರ್ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಭಾರತೀಯ ವಾಯುಪಡೆ 66,000 ಲೀಟರ್ ನೀರನ್ನು ಬಳಸಿದೆ.
ಬೆಂಕಿ ನಂದಿಸಲು ಭಾರತೀಯ ವಾಯುಪಡೆ (ಐಎಎಫ್) ಮಂಗಳವಾರ ಮಿ -17 ವಿ 5 ಹೆಲಿಕಾಪ್ಟರ್‌ನ್ನು ನಿಯೋಜಿಸಿತ್ತು. ಬೆಂಕಿ ನಂದಿಸುವ ಕಾರ್ಯಾಚರಣೆಯ ಫೋಟೋ ಹಾಗೂ ವಿಡಿಯೋವನ್ನು ವಾಯುಪಡೆ ಎಕ್ಸ್‌ನಲ್ಲಿ ಹಂಚಿಕೊಂಡಿದೆ.
Mi-17 V5 ಹೆಲಿಕಾಪ್ಟರ್ ಬೆಂಕಿ ನಂದಿಸುವ ಕಾರ್ಯಾಚರಣೆಯ ವೀಡಿಯೋವನ್ನು ವಾಯುಪಡೆ ಹಂಚಿಕೊಂಡಿದ್ದು, ಹೆಲಿಕಾಪ್ಟರ್‌ನ ಸಾಮರ್ಥ್ಯ ಹಾಗೂ ನಿಖರವಾದ ಕಾರ್ಯವನ್ನು ಅದರಲ್ಲಿ ನೋಡಬಹುದಾಗಿದೆ. ಹಲವಾರು ಬಾರಿ ಹಾರಾಟ ನಡೆಸಿದ Mi-17 V5 ಹೆಲಿಕಾಪ್ಟರ್ ಬೆಂಕಿ ಹೊತ್ತಿದ್ದ ಸ್ಥಳದಲ್ಲಿ ಸುಮಾರು 66,000 ಲೀಟರ್ ನೀರನ್ನು ಸುರಿದಿದೆ.



