March 26, 2026
Thursday, March 26, 2026
spot_img

ಯಾಣ ನೋಡಲು ಹೊರಟಿದ್ದ ಎಂಬಿಬಿಎಸ್‌ ವಿದ್ಯಾರ್ಥಿಗಳ ಬೈಕ್‌ ಅಪಘಾತ: ಯುವಕ ಸಾವು

ಹೊಸದಿಗಂತ ವರದಿ ಯಲ್ಲಾಪುರ :

ಯಾಣಕ್ಕೆ ಪ್ರವಾಸಕ್ಕೆ ಹೊರಟಿದ್ದ ಹುಬ್ಬಳ್ಳಿ ಯ ವೈದ್ಯಕೀಯ ಕಾಲೇಜಿನ ಎಂ ಬಿ ಬಿ ಎಸ್ ವಿದ್ಯಾರ್ಥಿಗಳ ಬೈಕು ತಾಲೂಕಿನ ಕಣ್ಣಿಗೇರಿ ಬಳಿ ಅಪಘಾತಕ್ಕೀಡಾಗಿದೆ. ಪರಿಣಾಮ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ.

ವೈದ್ಯಕೀಯ ಕಾಲೇಜಿನ ನಾಲ್ಕೈದು ವಿದ್ಯಾರ್ಥಿಗಳು ಶನಿವಾರ ಯಾಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ತಾಲೂಕಿನ ಕಣ್ಣಿಗೇರಿ ಗ್ರಾಮದ ಎಚ್ ಕೆ ಜಿ ಎನ್ ಸಿಮೆಂಟ್ ಪಾಕ್ಟರಿ ಬಳಿ ವಿದ್ಯಾರ್ಥಿ ರಾಜೀವ ಚೌದರಿ ಚಲಾಯಿಸುತ್ತಿದ್ದ ಬೈಕು ನಿಯಂತ್ರಣ ತಪ್ಪಿ ಬಿದ್ದು ಬೈಕಿನಲ್ಲಿ ಹಿಂದೆ ಕೂತಿದ್ದ ಯಾದಗಿರಿಯ ವರ್ಧನ ಶೆಟ್ಟಿ (19) ಅವರ ತಲೆ ಹೆದ್ದಾರಿಗೆ ಬಡಿಯಿತು. ಆ ತೀವ್ರತೆಗೆ ವರ್ಧನ ಶೆಟ್ಟಿ ಅವರು ಅಲ್ಲಿಯೇ ಸಾವನ್ನಪ್ಪಿದ್ದಾರೆ.

ಅಪಘಾತದ ವಿಷಯ ತಿಳಿದು ಸ್ಥಳಕ್ಕೆ ಪಿಐ ರಮೇಶ ಹಾನಾಪುರ, . ಪಿಎಸೈ ಸಿದ್ದಪ್ಪ ಗುಡಿ ತೆರಳಿ ಗಾಯಗೊಂಡು ಬಿದ್ದಿದ್ದ ರಾಜೀವ ಚೌದರಿ ಅವರನ್ನು ಆಸ್ಪತ್ರೆಗೆ ದಾಖಲಿ ಸಿದರು. ಅವರೊಂದಿಗೆ ಇದ್ದ ಎಂ ಬಿ ಬಿ ಎಸ್ ವಿದ್ಯಾರ್ಥಿ ಸೃಜನ ರಮೇಶ ಶೆಟ್ಟ‌ರ್ ಹೇಳಿಕೆ ಪಡೆದುಕೊಂಡು, ರಾಜೀವ ಚೌದರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !