Saturday, October 11, 2025

ಅತ್ತ ಜೈಲಿನಲ್ಲಿ ಚಾಲೆಂಜಿಂಗ್‌ ಸ್ಟಾರ್‌…ಇತ್ತ ದರ್ಶನ್ ಅಭಿನಯದ ʼದಿ ಡೆವಿಲ್ʼ ಚಿತ್ರದ ಹಾಡು ರಿಲೀಸ್‌!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅತ್ತ ಜೈಲಿನಲ್ಲಿದ್ದು, ಇತ್ತ ಈ ವರ್ಷದ ಬಹುನಿರೀಕ್ಷಿತ ಚಿತ್ರ ʼದಿ ಡೆವಿಲ್‌ʼ ಸಿನಿಮಾದ ಸಾಂಗ್‌ ʼಒಂದೇ ಒಂದು ಸಲʼ ರಿಲೀಸ್‌ ಆಗಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ದರ್ಶನ ನಾಯಕನಲ್ಲಿ ನಟಿಸುತ್ತಿದ್ದಾರೆ.
ʼದಿ ಡೆವಿಲ್ʼ ಚಿತ್ರದ ಈ ʼಒಂದೇ ಒಂದು ಸಲʼ ಎಂಬ ಸುಮಧುರ ಯುಗಳ ಗೀತೆ ಸರಿಗಮಪ ಮ್ಯೂಸಿಕ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ಬರೆದಿರುವ ಈ ಹಾಡನ್ನು ಕಪಿಲ್ ಕಪಿಲನ್ ಹಾಗೂ ಚಿನ್ಮಯಿ ಶ್ರೀಪಾದ ಹಾಡಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

https://www.youtube.com/watch?v=YwqzJF1iBhA

ಸಂತು ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚನಾ ರೈ ಹೆಜ್ಜೆ ಹಾಕಿದ್ದಾರೆ.

ಸುಧಾಕರ್.ಎಸ್.ರಾಜ್ ಅವರ ಛಾಯಾಗ್ರಹಣವಿರುವ ʼದಿ ಡೆವಿಲ್ʼ ಚಿತ್ರಕ್ಕೆ ಹರೀಶ್ ಕೊಮ್ಮೆ ಸಂಕಲನ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ ಹಾಗೂ ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನವಿದೆ. ತಶ್ವಿನಿ ವೀರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದು, ಕಾಂತರಾಜ್ ಎಸ್.ಎಸ್. ಸಂಭಾಷಣೆ ಬರೆದಿದ್ದಾರೆ. ಚೇತನ್ ಹಾಗೂ ತಶ್ವಿನಿ ವಸ್ತ್ರವಿನ್ಯಾಸ ಮಾಡಿದ್ದಾರೆ.

ಕರಾವಳಿ ಬೆಡಗಿ ರಚನಾ ರೈ ಇದೇ ಮೊದಲ ಬಾರಿಗೆ ದರ್ಶನ್‌ಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರ ಡಿಸೆಂಬರ್‌ 12ರಂದು ತೆರೆಗೆ ಬರಲಿದೆ.

error: Content is protected !!