February 3, 2026
Tuesday, February 3, 2026
spot_img

ಮೆಗಾಸ್ಟಾರ್ ಅಬ್ಬರ ಈಗ ಮೊಬೈಲ್ ಪರದೆಯಲ್ಲಿ: OTTಗೆ ಲಗ್ಗೆ ಇಟ್ಟ ‘ಮನ ಶಂಕರ ವರಪ್ರಸಾದ್ ಗಾರು’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ್ದ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾ ಈಗ ಡಿಜಿಟಲ್ ಪರದೆ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಕಂಡ ಈ ಸಿನಿಮಾ, ಇದೀಗ ಒಟಿಟಿ ಪ್ರೇಕ್ಷಕರನ್ನು ರಂಜಿಸಲು ಸಿದ್ಧತೆ ನಡೆಸಿದೆ.

ಎಲ್ಲಿ ವೀಕ್ಷಿಸಬಹುದು?: ಖ್ಯಾತ ಓಟಿಟಿ ಸಂಸ್ಥೆ ಜೀ5 (Zee5) ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಪ್ರೇಮಿಗಳ ದಿನಾಚರಣೆಯ ಉಡುಗೊರೆಯಾಗಿ ಫೆಬ್ರವರಿ 11 ರಂದು ಸ್ಟ್ರೀಮಿಂಗ್ ಆರಂಭವಾಗಲಿದೆ.

ಈ ಸಿನಿಮಾ ಕೇವಲ ತೆಲುಗಿಗೆ ಸೀಮಿತವಾಗದೆ ಕನ್ನಡ, ತಮಿಳು, ಹಿಂದಿ, ಮಲಯಾಳಂ, ಮರಾಠಿ ಮತ್ತು ಬಾಂಗ್ಲಾ ಸೇರಿದಂತೆ ಒಟ್ಟು 7 ಭಾಷೆಗಳಲ್ಲಿ ಲಭ್ಯವಿರಲಿದೆ.

ಇದನ್ನೂ ಓದಿ:

ಕಳೆದ ಕೆಲವು ವರ್ಷಗಳಿಂದ ಸತತ ಸೋಲುಗಳಿಂದ ಕಂಗೆಟ್ಟಿದ್ದ ಚಿರಂಜೀವಿ ಅವರಿಗೆ ಈ ಸಿನಿಮಾ ಹೊಸ ಚೈತನ್ಯ ನೀಡಿದೆ. ಪಕ್ಕಾ ಆಕ್ಷನ್ ಮತ್ತು ಕಾಮಿಡಿ ಎಂಟರ್ಟೈನರ್ ಆಗಿರುವ ಈ ಚಿತ್ರದಲ್ಲಿ ಚಿರಂಜೀವಿ ಅವರ ಜೊತೆ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಕ್ಟರಿ ವೆಂಕಟೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಸಿನಿಮಾದ ತೂಕವನ್ನು ಹೆಚ್ಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !