Tuesday, October 28, 2025

ಮೆಗಾಸ್ಟಾರ್ ಚಿರಂಜೀವಿಗೆ ಡೀಪ್‌ಫೇಕ್ ಕಾಟ: ವೆಬ್‌ಸೈಟ್‌ಗಳ ವಿರುದ್ಧ ದೂರು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮೆಗಾಸ್ಟಾರ್ ಚಿರಂಜೀವಿಗೆ ಡೀಪ್‌ಫೇಕ್ ಕಾಟ ಶುರುವಾಗಿದೆ. ಚಿರಂಜೀವಿ ಹೆಸರು ಹಾಗೂ ಚಿತ್ರವನ್ನು ಬಳಸಿಕೊಂಡು ಎಐ ರಚಿತ, ಮಾರ್ಫಿಂಗ್ ಮಾಡಲಾದ ಅಶ್ಲೀಲ ವೀಡಿಯೊಗಳನ್ನು ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಹಲವು ವೆಬ್‌ಸೈಟ್‌ಗಳ ವಿರುದ್ಧ ಹಿರಿಯ ನಟ ದೂರು ದಾಖಲಿಸಿದ್ದಾರೆ.

ಹಲವು ವೆಬ್‌ಸೈಟ್‌ಗಳು `ನನ್ನ ಹೆಸರು, ಹೋಲಿಕೆ ಮತ್ತು ಚಿತ್ರವನ್ನು ಬಳಸಿಕೊಂಡು ಎಐ ನಿರ್ಮಿತ ಮಾರ್ಫಿಂಗ್ ಮಾಡಿರುವ ಅಶ್ಲೀಲ ವೀಡಿಯೊಗಳನ್ನು ಪ್ರಸಾರ ಮಾಡಿ, ನನ್ನನ್ನು ಅಶ್ಲೀಲ ಕೃತ್ಯಗಳಲ್ಲಿ ತಪ್ಪಾಗಿ ಚಿತ್ರಿಸಿವೆ’ ಎಂದು ದೂರು ನೀಡಿದ್ದಾರೆ.

ದೂರಿನ ಮೇರೆಗೆ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಸೆಕ್ಷನ್ 67 ಮತ್ತು 67ಂ, ಭಾರತೀಯ ನ್ಯಾಯ ಸಂಹಿತೆ 79, 294, 296 ಮತ್ತು 336(4), ಮತ್ತು 1986ರ ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ 2, 3 ಮತ್ತು 4ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

error: Content is protected !!