April 9, 2026
Thursday, April 9, 2026
spot_img

ಅತ್ತ ಹಿಂಬಾಕಿ ಪಾವತಿಗೆ ಓಕೆ ಎಂದ ಸಿದ್ದು ಸರಕಾರ…ಇತ್ತ ನಾಳೆ ‘ಬೆಂಗಳೂರು ಚಲೋ’ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾರಿಗೆ ನೌಕರರ ಹಿಂಬಾಕಿ ನೀಡುವಲ್ಲಿ ವಿಳಂಬ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಹಿಂಬಾಕಿ ಪಾವತಿಗಾಗಿ ಬರೋಬ್ಬರಿ 1,239 ಕೋಟಿ ರೂಪಾಯಿ ಬಿಡುಗಡೆ ನಿರ್ಧರಿಸಿದೆ. ಜೊತೆಗೆ ವೇತನ ಪರಿಷ್ಕರಣೆಗೂ ಆದೇಶಿಸಿದೆ.

ಇದರ ನಡುವೆಯೂ ನಾಳೆ ಬೆಂಗಳೂರು ಚಲೋ ಫಿಕ್ಸ್ ಆಗಿದೆ. ನಾಳೆ ನಿಗದಿಯಂತೆ ಬೆಂಗಳೂರು ಚಲೋ ನಡೆಯಲಿದೆ ಎಂಬುದಾಗಿ ಸಾರಿಗೆ ನೌಕರರ ಮುಖಂಡ ಜಗದೀಶ್ ತಿಳಿಸಿದ್ದಾರೆ.

ಈ ಕುರಿತು ಬೆಂಗಳೂರಲ್ಲಿ ಮಾಹಿತಿ ನೀಡಿದ ಅವರು, ನಮಗೆ ಇನ್ನೂ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ನಾಳೆ 5ರಿಂದ 10 ಸಾವಿರ ನೌಕರರು ಫ್ರೀಡಂ ಪಾರ್ಕ್ ನಲ್ಲಿ ಸೇರಲಿದ್ದಾರೆ. ನಮಗೆ ರಾಜ್ಯ ಸರ್ಕಾರವು 38 ತಿಂಗಳ ಹಿಂಬಾಕಿ ಕೊಡಲೇಬೇಕು ಎಂದು ಆಗ್ರಹಿಸಿದರು.

2024ರಿಂದ ವೇತನ ಪರಿಷ್ಕರಣೆ ಆಗಬೇಕೆನ್ನುವುದು ನಮ್ಮ ಕನಸಾಗಿತ್ತು. ಸರ್ಕಾರದ ನಿರ್ಧಾರದಿಂದ ಸಿಬ್ಬಂದಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಲಿದೆ. ಮುಷ್ಕರದ ಬಗ್ಗೆ ನಾಳೆ ಸಂಜೆ 4 ಗಂಟೆಗೆ ಫ್ರೀಡಂ ಪಾರ್ಕ್ ನಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !