Thursday, December 18, 2025

ಮೆಸ್ಸಿ ಕೈ ಸೇರಿದೆ ಅನಂತ್ ಅಂಬಾನಿಯ ಸ್ಪೆಷಲ್ ಗಿಫ್ಟ್: ಏನ್ ಗೊತ್ತಾ ಆ ದುಬಾರಿ ಉಡುಗೊರೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ಫುಟ್ಬಾಲ್ ಲೋಕದ ಸೂಪರ್‌ಸ್ಟಾರ್ ಲಿಯೋನಲ್ ಮೆಸ್ಸಿ ಇತ್ತೀಚೆಗೆ ಕೈಗೊಂಡಿದ್ದ ಭಾರತ ಪ್ರವಾಸ ಹಲವು ಕಾರಣಗಳಿಂದ ಸುದ್ದಿಯಾಗಿತ್ತು. ಈ ಪ್ರವಾಸದ ವೇಳೆ ಗುಜರಾತ್‌ನ ಜಾಮ್‌ನಗರದಲ್ಲಿರುವ ವಂತಾರಕ್ಕೆ ಮೆಸ್ಸಿ ಭೇಟಿ ನೀಡಿದ್ದು, ಅಲ್ಲಿ ಉದ್ಯಮಿ ಮುಕೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿ, ಮೆಸ್ಸಿಗೆ ಅಪರೂಪದ ಹಾಗೂ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ.

ವಂತಾರದಲ್ಲಿ ನಡೆದ ಆತ್ಮೀಯ ಭೇಟಿಯ ಸಂದರ್ಭದಲ್ಲೇ ಅನಂತ್ ಅಂಬಾನಿ ಮೆಸ್ಸಿಗೆ ಸುಮಾರು ₹10.9 ಕೋಟಿ ಮೌಲ್ಯದ ಐಷಾರಾಮಿ ವಾಚ್ ಉಡುಗೊರೆಯಾಗಿ ನೀಡಿದ್ದಾರೆ. ಇದು ರಿಚರ್ಡ್ ಮಿಲ್ಲೆ ಸಂಸ್ಥೆಯ RM 003-V2 GMT ಮಾಡೆಲ್ ಆಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವಿಶಿಷ್ಟ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಈ ವಾಚ್ ಜಗತ್ತಿನಲ್ಲಿ ಕೇವಲ 12 ಜನರಲ್ಲೇ ಇರುವ ಅಪರೂಪದ ಸಂಗ್ರಹವೆನ್ನಲಾಗಿದೆ.

ರೊಲೆಕ್ಸ್, ಪಾಟೆಕ್ ಫಿಲಿಪ್, ಆಡೆಮರ್ಸ್ ಪಿಗುಯೆಟ್ ಸೇರಿದಂತೆ ಹಲವು ದುಬಾರಿ ವಾಚ್‌ಗಳ ಒಡೆಯನಾಗಿರುವ ಮೆಸ್ಸಿಯ ಐಷಾರಾಮಿ ಸಂಗ್ರಹಕ್ಕೆ ಇದೀಗ ಮತ್ತೊಂದು ವಿಶೇಷ ಸೇರ್ಪಡೆ ಆಗಿದೆ. ಇದೇ ವೇಳೆ, ವಂತಾರ ಭೇಟಿ ಸ್ಮರಣಾರ್ಥವಾಗಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಂಪತಿ ಸಿಂಹದ ಮರಿಯೊಂದಕ್ಕೆ ‘ಲಿಯೋನಲ್’ ಎಂದು ನಾಮಕರಣ ಮಾಡಿದ್ದಾರೆ.

error: Content is protected !!