March 15, 2026
Sunday, March 15, 2026
spot_img

ಮೆಟ್ರೋ ದರ ಏರಿಕೆ ವಿಚಾರ: ಖಾಲಿ ಮಾತನಾಡೋದು ಬೇಡ, ಸಂಸದರು ಪತ್ರ ಬರೆಯಲಿ ಎಂದ ಡಿ.ಕೆ.ಶಿವಕುಮಾರ್

ಹೊಸ ದಿಗಂತ ವರದಿ, ರಾಯಚೂರು :

ಮೆಟ್ರೋ ದರ ಏರಿಕೆ ವಿಷಯಕ್ಕೆ ಸಂಭಂಧಿಸಿದಂತೆ ಮೊದಲು ಸರ್ಕಾರಕ್ಕೆ, ನನಗೆ,ಕೇಂದ್ರ ಸರ್ಕಾರಕ್ಕೆ ಎಲ್ಲ ಸಂಸದರು ಪತ್ರ ಬರೆಯಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.

ನಗರದಲ್ಲಿ ಶನಿವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ಸಂಸದ ತೇಜಸ್ವಿ ಸೂರ್ಯ ಸಧ್ಯಕ್ಕೆ ಮೆಟ್ರೋ ದರ ಏರಿಕೆ ಇಲ್ಲ ಎಂಬ ಹೇಳಿಕೆಗೆ ಮೇಲಿನಂತೆ ಪ್ರತಿಕ್ರೀಯೆ ನೀಡಿದರು.

ಖಾಲಿ ಮಾತನಾಡೋದು ಬೇಡ. ಪತ್ರ ಬರೆದರೆ ಯಾರ್ಯಾರು ಬೇಡ ಅಂನ್ನುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ದರ ಏರಿಕೆ ನಾವು ಬೇಡ ಅಂತ ಅನ್ನುತ್ತಿದ್ದೇವೆ ಅದು ಬೇರೆ ವಿಚಾರ. ಯಾವುದೇ ಸಂಸದ ಒಬ್ಬರೇ ಒಬ್ಬ ಹೆಸರನ್ನು ಹೇಳಿಲ್ಲ. ಎಲ್ಲರೂ ಸೇರಿ ಕಾಗದ ಬರೆಯಲಿ, ಪ್ರತಿಭಟನೆಗೆ ವಿರೋಧ ಮಾಡಬಾರದು ಅನ್ನು ದೃಷ್ಠಿಯಿಂದ ಪ್ರಧಾನಿ ಅವರಿಗೂ ಪತ್ರ ಬರೆಯಲಿ, ಕೇಂದ್ರ ಸಚಿವರಿಗೂ ಬರೆಯಲಿ ಆಮೇಲೆ ಮಾತನಾಡೋಣ. ಕೇವಲ ಮಾಧ್ಯಮಗಳ ಮುಂದೆ ಮಾತನಾಡುವುಸನ್ನು ಯಾರಿ ಕೇಳುತ್ತಾರೆ ಎಂದು ಖಾರವಾಗಿ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಎಂ.ಎಲ್.ಸಿ ಯತೀಂದ್ರ ಮತ್ತೆ ಮತ್ತೆ ಸಿಎಂ ಬದಲಾವಣೆ ಇಲ್ಲ ಅಂತ ಹೇಳುತ್ತಿರುವ ವಿಚಾರ ಕುರಿತು ಇಗಾಗಲೇ ಹೇಳಿದ್ದೇನೆ ಎಂದರು.

ಸಿದ್ದರಾಮಯ್ಯ ಏನು ಹೇಳಿದ್ದಾರೆ. ಸಿದ್ದರಾಮಯ್ಯ ಗಿಂತ ಅವರು ಸ್ವಲ್ಪ ಹೆಚ್ಚಿನ ಹೈಕಮಾಂಡ್. ಅವರು ನಮ್ಮ ಹೈಕಮಾಂಡ್ ಅಂತ‌‌. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಿದ್ದರಾಮಯ್ಯ ಹೈಕಮಾಂಡ್ ಹೇಳಿದಂತೆ ಅನ್ಬುತ್ತಿದ್ದಾರೆ ಎಂದರೆ ಅವರಿಗಿಂತ ಯತೀಂಧರ ಅವರು ಅವರಕ್ಕಿಂತ ಮೇಲೆ ಎನ್ನುವ ರೀತಿಯಲ್ಲಿ ಹೇಳುತ್ತಿದ್ದಾರೆ ಇದಕ್ಕೆ ಕಾಲವೇ ಹೇಳುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವರಾದ ಶರಣಪ್ರಕಾಶ ಪಾಟೀಲ, ಎನ್.ಎಸ್.ಭೋಸರಾಜು, ಶಿವರಾಜ ತಂಗಡಿ, ಬಸನಗೌಡ ದದ್ದಲ, ಎ.ವಸಂತಕುಮಾರ ಸೇರಿದಂತೆ ಇತರರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !