ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಯುಷ್ ಮ್ಹಾತ್ರೆ, ಶಿವಂ ದುಬೆ ಭರ್ಜರಿ ಬ್ಯಾಟಿಂಗ್ ನಿಂದಾಗಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಕಳೆದುಕೊಂಡು 209 ರನ್ಗಳ ಬೃಹತ್ ಮೊತ್ತ ಗಳಿಸಿದ್ದು, ಶ್ರೇಯಸ್ ಪಡೆ ಗೆಲುವಿಗೆ 210 ರನ್ಗಳ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಸಿಎಸ್ಕೆ ಗೆ ಮತ್ತೆ ಸಂಜು ಸ್ಯಾಮ್ಸನ್ ನಿರಾಸೆ ಮೂಡಿಸಿದ್ದು, ಕೇವಲ 7 ರನ್ಗಳಿಸಿ ಔಟಾಗಿದ್ದಾರೆ. ಬಳಿಕ ಆಯುಷ್ ಮ್ಹಾತ್ರೆ , ನಾಯಕ ರುತುರಾಜ್ ಗಾಯಕ್ವಾಡ್ ಜೊತೆಗೂಡಿ 2ನೇ ವಿಕೆಟ್ಗೆ 96 ರನ್ಗಳ ಜೊತೆಯಾಟ ನೀಡಿದರು. ಗಾಯಕ್ವಾಡ್ 28 ರನ್ಗಳಿಸಿ ಚಹಲ್ಗೆ ವಿಕೆಟ್ ಒಪ್ಪಿಸಿದರು.
ಮ್ಹಾತ್ರೆ ಭರ್ಜರಿ ಬ್ಯಾಟಿಂಗ್ ನಡೆಸಿ ಅರ್ಧಶತಕ ಸಿಡಿಸಿದರು. 43 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ಗಳ ನೆರವಿನಿಂದ 73 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಜೊತೆಯಾದ ಸರ್ಫರಾಜ್ ಖಾನ್ , ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಖಾನ್ 32 ರನ್ಗಳಿಸಿ ವಿಜಯ್ ಕುಮಾರ್ಗೆ ವಿಕೆಟ್ ನೀಡಿದರೆ, ದುಬೆ 45 ರನ್ ಗಳಿಸಿ ಅಜೇಯರಾಗಿ ಉಳಿದರು.



