February 20, 2026
Friday, February 20, 2026
spot_img

AI ಕೌಶಲ್ಯ ಅಭಿವೃದ್ಧಿಗೆ 50 ಶತಕೋಟಿ ಡಾಲರ್‌ ಹೂಡಿಕೆ ಘೋಷಿಸಿದ ಮೈಕ್ರೋಸಾಫ್ಟ್‌!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

2030 ರ ವೇಳೆಗೆ ಭಾರತ ಸೇರಿ ದಕ್ಷಿಣ ಏಷ್ಯಾದಾದ್ಯಂತ AI ಸಂಬಂಧಿತ ಮೂಲ ಸೌಕರ್ಯಗಳ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಸುಮಾರು 50 ಶತಕೋಟಿ ಡಾಲರ್‌ (ಸುಮಾರು 4 ಲಕ್ಷ ಕೋಟಿ ರೂ.) ಹೂಡಿಕೆ ಮಾಡುವುದಾಗಿ ಮೈಕ್ರೋಸಾಫ್ಟ್‌ ಘೋಷಣೆ ಮಾಡಿದೆ.

ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಮೈಕ್ರೋಸಾಫ್ಟ್ ಅಧ್ಯಕ್ಷ ಬ್ರಾಡ್ ಸ್ಮಿತ್ ಮಾತನಾಡಿದ್ದು, AI ಕೆಲವು ದೇಶಗಳಲ್ಲಿ ವೇಗವಾಗಿ ಬೆಳೆಯುತ್ತಿದ್ದರೆ, ಇನ್ನೂ ಕೆಲ ದೇಶಗಳಲ್ಲಿ ಅದರ ವ್ಯಾಪ್ತಿ ಸೀಮಿತವಾಗಿದೆ. ಈ ವ್ಯತ್ಯಾಸವನ್ನು ತಪ್ಪಿಸಿ, ದೊಡ್ಡ ದೊಡ್ಡ ದೇಶಗಳು ಮತ್ತು ದೊಡ್ಡ ಕಂಪನಿಗಳು ಮಾತ್ರವಲ್ಲದೇ ಸಾಮಾನ್ಯ ಜನರನ್ನೂ ಎಐ (ಕೃತಕ ಬುದ್ಧಿಮತ್ತೆ) ತಲುಪಬೇಕೆಂದು ಕಂಪನಿ ಬಯಸುತ್ತದೆ ಎಂದು ತಿಳಿಸಿದರು.

AI ಗೆ ಭಾರತ, ಆಫ್ರಿಕಾ ಮತ್ತು ಲ್ಯಾಟಿನ್‌ ಅಮೆರಿಕದಂತಹ ದೊಡ್ಡ ದೇಶಗಳಲ್ಲಿದೊಡ್ಡ ಅವಕಾಶವಿದೆ. ಈ ದೇಶಗಳಲ್ಲಿ ಪ್ರತಿಭೆಗಳು ಮತ್ತು ಬಳಕೆದಾರರು ಇಬ್ಬರೂ ಇದ್ದಾರೆ. ಆದ್ರೆ ಸರಿಯಾದ ಮೂಲಸೌಕರ್ಯ ಮತ್ತು ತರಬೇತಿ ಇಲ್ಲದೇ, ಎಐ ನ ಪೂರ್ಣ ಪ್ರಯೋಜನವನ್ನು ಅರಿತುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮೈಕ್ರೋಸಾಫ್ಟ್‌ ಎಐ ಮೂಲ ಸೌಕರ್ಯಗಳ ವೃದ್ಧಿಗೆ ಮುಂದಾಗಿದೆ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !