March 26, 2026
Thursday, March 26, 2026
spot_img

ಕೋವಿಡ್‌ಗಿಂತಲೂ ಡೇಂಜರ್ ಮಿಡ್ಲ್ ಈಸ್ಟ್ ವಾರ್! ಪುಟಿನ್ ಎಚ್ಚರಿಕೆ ಹಿಂದಿರೋ ಅಸಲಿ ಕಥೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಈ ಭೀಕರ ಸಂಘರ್ಷ ಕೇವಲ ಎರಡು-ಮೂರು ದೇಶಗಳ ನಡುವಿನ ಜಗಳವಲ್ಲ, ಇದು ಎರಡನೇ ‘ಕೋವಿಡ್’ ಮಹಾಮಾರಿಯಂತೆ ಜಗತ್ತನ್ನು ಕಾಡಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭವಿಷ್ಯ ನುಡಿದಿದ್ದಾರೆ.

ಪುಟಿನ್ ಅವರ ಪ್ರಕಾರ, ಈ ಯುದ್ಧವು ಈಗಾಗಲೇ ಅಂತರಾಷ್ಟ್ರೀಯ ಪೂರೈಕೆ ಸರಪಳಿ ಮತ್ತು ಉತ್ಪಾದನಾ ವಲಯವನ್ನು ಹಳಿ ತಪ್ಪಿಸಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯ ಭೀತಿ. ಕೃಷಿ ಮತ್ತು ಕೈಗಾರಿಕಾ ವಲಯದ ಮೇಲೆ ಭಾರೀ ಒತ್ತಡ. ಈ ಯುದ್ಧ ಯಾವಾಗ ಮುಗಿಯುತ್ತದೆ ಎಂಬುದು ಅದನ್ನು ಶುರು ಮಾಡಿದವರಿಗೂ ಗೊತ್ತಿಲ್ಲ ಎನ್ನುವ ಮಟ್ಟಕ್ಕೆ ಪರಿಸ್ಥಿತಿ ತಲುಪಿದೆ ಎಂದು ತಿಳಿಸಿದ್ದಾರೆ.

ಉಕ್ರೇನ್ ಯುದ್ಧದ ಸಮಯದಲ್ಲಿ ತನಗೆ ಮುಳುವಾಗಿದ್ದ ಅಮೆರಿಕಕ್ಕೆ ತಿರುಗೇಟು ನೀಡಲು ಪುಟಿನ್ ಈ ಸಂಘರ್ಷವನ್ನು ಬಳಸಿಕೊಳ್ಳುತ್ತಿದ್ದಾರೆ. ಫೆಬ್ರವರಿ 28 ರಿಂದ ಆರಂಭವಾದ ಈ ಯುದ್ಧದಲ್ಲಿ ರಷ್ಯಾ ಬಹಿರಂಗವಾಗಿಯೇ ಇರಾನ್ ಪರ ನಿಂತಿದೆ. ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಇರಾನ್‌ಗೆ ರಷ್ಯಾ ‘ರಿಯಲ್ ಟೈಮ್ ಇಂಟೆಲಿಜೆನ್ಸ್’ ನೀಡುತ್ತಿದೆ ಎಂಬ ಗಂಭೀರ ಆರೋಪ ಕೂಡ ಕೇಳಿಬಂದಿದೆ.

ಹಾರ್ಮುಜ್ ಜಲಸಂಧಿಯ ಬಳಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ನೌಕಾಪಡೆಯ ದೈತ್ಯ ಶಕ್ತಿ ಅಲಿರೆಜಾ ತಂಗ್ಸಿರಿ ಹತರಾಗಿದ್ದಾರೆ. ಇದು ಇರಾನ್‌ಗೆ ಬಿದ್ದ ಬಹುದೊಡ್ಡ ಪೆಟ್ಟು.

ಈಗಾಗಲೇ ಮೂರು ಡಜನ್‌ಗಿಂತಲೂ ಹೆಚ್ಚು ಕಮಾಂಡರ್‌ಗಳನ್ನು ಅಮೆರಿಕ-ಇಸ್ರೇಲ್ ಪಡೆಗಳು ಹತ್ಯೆ ಮಾಡಿವೆ. ಈಗ ತಂಗ್ಸಿರಿ ಸಾವಿಗೆ ಇರಾನ್ ಯಾವ ರೀತಿ ಸೇಡು ತೀರಿಸಿಕೊಳ್ಳಬಹುದು ಎಂಬುದು ಗಲ್ಫ್ ರಾಷ್ಟ್ರಗಳ ನಿದ್ದೆಗೆಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !