Tuesday, September 30, 2025

10 ವರ್ಷಗಳಲ್ಲಿ ಶೇಕಡ 63ರಷ್ಟು ಏರಿಕೆ: ದೇಶದಲ್ಲಿ ಬರೋಬ್ಬರಿ 239 ಮಿಲಿಯನ್ ಟನ್‌ ಮುಟ್ಟಿದ ಹಾಲು ಉತ್ಪಾದನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಹಾಲು ಉತ್ಪಾದನೆಯು ಶೇಕಡಾ 63 ಕ್ಕಿಂತ ಹೆಚ್ಚು ಏರಿಕೆಯಾಗಿ 146 ಮಿಲಿಯನ್ ಟನ್‌ಗಳಿಂದ 239 ಮಿಲಿಯನ್ ಟನ್‌ಗಳಿಗೆ ತಲುಪಿದೆ ಎಂದು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಹೇಳಿದೆ.

ಜಾಗತಿಕ ಹಾಲು ಉತ್ಪಾದನೆಯಲ್ಲಿ ಭಾರತವು ಮೊದಲ ಸ್ಥಾನದಲ್ಲಿ ಮುಂದುವರಿದಿದೆ ಮತ್ತು ವಿಶ್ವದ ಪೂರೈಕೆಯ ಸುಮಾರು ಕಾಲು ಭಾಗದಷ್ಟು ಕೊಡುಗೆ ನೀಡುತ್ತಿದೆ. ಹೈನುಗಾರಿಕೆಯು ರಾಷ್ಟ್ರೀಯ ಆರ್ಥಿಕತೆಗೆ ಶೇಕಡ 5ರಷ್ಟು ಕೊಡುಗೆ ನೀಡುತ್ತಿದ್ದು, 8 ಕೋಟಿಗೂ ಹೆಚ್ಚು ರೈತರಿಗೆ ನೇರವಾಗಿ ಉದ್ಯೋಗ ಒದಗಿಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಕಳೆದ ದಶಕದಲ್ಲಿ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಹಾಲಿನ ಲಭ್ಯತೆಯೂ ತೀವ್ರವಾಗಿ ಹೆಚ್ಚಾಗಿದ್ದು, ತಲಾ ಪೂರೈಕೆ ಶೇಕಡ 48ರಷ್ಟು ಏರಿಕೆಯಾಗಿದೆ ಎಂದೂ ಸಚಿವಾಲಯ ಹೇಳಿದೆ.