ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ಲೈಓವರ್ ಡಿವೈಡರ್‌ಗೆ ಮಿನಿ ಟೆಂಪೋ ಡಿಕ್ಕಿ ಹೊಡೆದ ಘಟನೆ ಯಶವಂತಪುರ ಫ್ಲೈಓವರ್ ಬಳಿ ನಡೆದಿದೆ.
ಮಿನಿ ಟೆಂಪೋ ತುಮಕೂರು ಹೈವೇಯಿಂದ ಯಶವಂತಪುರ ಫ್ಲೈಓವರ್ ಕಡೆ ಬರುತ್ತಿತ್ತು. ಈ ವೇಳೆ ಮುಂಭಾಗ ಬರುತ್ತಿದ್ದ ಕಾರಿನ ಚಾಲಕ ಸಡನ್ ಆಗಿ ಬಲ ಭಾಗಕ್ಕೆ ಬಂದಿದ್ದಾನೆ. ಏಕಾಏಕಿ ಬಲಕ್ಕೆ ಬಂದ ಪರಿಣಾಮ ಹಿಂದೆ ಬರುತ್ತಿದ್ದ ಮಿನಿ ಟೆಂಪೋ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಗುದ್ದಿದೆ.
ಡಿವೈಡರ್‌ಗೆ ಗುದ್ದಿದ ಪರಿಣಾಮ ಮಿನಿ ಟೆಂಪೋ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಸದ್ಯ ಟೆಂಪೋ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಯಶವಂತಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಫ್ಲೈಓವರ್ ಡಿವೈಡರ್‌ಗೆ ಗುದ್ದಿದ ಮಿನಿ ಟೆಂಪೋ: ದೊಡ್ಡ ಅನಾಹುತ ತಪ್ಪಿ ಹೋಯ್ತು!

