February 10, 2026
Tuesday, February 10, 2026
spot_img

ಬಾಂಗ್ಲಾದೇಶದಲ್ಲಿ ಮತ್ತೆ ಹಿಂದು ವ್ಯಾಪಾರಿಯನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗೆ ಎರಡು ದಿನ ಇರುವಾಗಲೇ ಮತೋರ್ವ ಹಿಂದು ಉದ್ಯಮಿಯನ್ನು ಹತ್ಯೆ ಮಾಡಿದ್ದಾರೆ.

ಇದುವರೆಗೂ 10 ಕ್ಕೂ ಹೆಚ್ಚಿನ ಹಿಂದುಗಳನ್ನು ಇಸ್ಲಾಮಿಕ್‌ ಗುಂಪುಗಳು ಕೊಲೆ ಮಾಡಿದೆ. ಇದೀಗ ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಮತೊರ್ವನನ್ನು ಕೊಲೆ ಮಾಡಿದ್ದಾರೆ.

ಬಲಿಯಾದ 62 ವರ್ಷದ ಸುಶೇನ್ ಚಂದ್ರ ಸರ್ಕಾರ್, ದಕ್ಷಿಣಕಂದ ಗ್ರಾಮದ ನಿವಾಸಿಯಾಗಿದ್ದು, ಅಕ್ಕಿ ವ್ಯಾಪಾರಿಯಾಗಿದ್ದರು. ಉಪ ಜಿಲ್ಲೆಯ ಬೋಗರ್ ಬಜಾರ್‌ನ ಛೇದಕದಲ್ಲಿ ಅವರು “ಭಾಯ್ ಭಾಯ್ ಎಂಟರ್‌ಪ್ರೈಸ್” ಅನ್ನು ಹೊಂದಿದ್ದರು ಎಂದು ತಿಳಿದು ಬಂದಿದೆ.

ಪೊಲೀಸರ ಪ್ರಕಾರ, ರಾತ್ರಿ 11 ಗಂಟೆಗೆ ಅಪರಿಚಿತ ದುಷ್ಕರ್ಮಿಗಳು ಮಾರುಕಟ್ಟೆಯ ಛೇದಕದಲ್ಲಿ ಕೊಲೆ ನಡೆದಿದೆ. ಅವರ ಕುಟುಂಬವು ಅಂಗಡಿಯಲ್ಲಿ ಹುಡುಕಾಡುತ್ತಿದ್ದಾಗ ರಕ್ತಸಿಕ್ತ ಸ್ಥಿತಿಯಲ್ಲಿ ಅವರು ಕಂಡು ಬಂದಿದ್ದಾರೆ. ತ್ರಿಶಾಲ್ ಪೊಲೀಸ್ ಠಾಣಾಧಿಕಾರಿ ಮುಹಮ್ಮದ್ ಫಿರೋಜ್ ಹೊಸೈನ್ ಘಟನೆಯನ್ನು ದೃಢಪಡಿಸಿದ್ದು, ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಮತ್ತು ಗುರುತಿಸಲು ತನಿಖೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ. ಹತ್ಯೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಗ್ಲಾದಲ್ಲಿ ಉಸ್ಮಾನ್‌ ಹಾದಿ ಸಾವಿನ ಬಳಿಕ ಉದ್ವಿಗ್ನತೆ ಹೆಚ್ಚಾಗಿದೆ. ಕಳೆದ ಡಿಸೆಂಬರ್‌ನಲ್ಲಿ ದೀಪು ಚಂದ್ರ ದಾಸ್ ಎಂಬಾತನ ಹತ್ಯೆ ಎಂಬುವವನನ್ನು ಕೊಲೆ ಮಾಡಲಾಗಿತ್ತು. ಇದರ ಬಳಿಕ ಬಾಂಗ್ಲಾದಾದ್ಯಂತ 10 ಕ್ಕೂ ಹೆಚ್ಚಿನ ಹಿಂದುಗಳನ್ನು ಹತ್ಯೆ ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !