ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರ ಏಷ್ಯಾಕಪ್ ಟೂರ್ನಿಗೆ ಆಯ್ಕೆ ಮಾಡದ ಕಾರಣ ಪಾಕಿಸ್ತಾನದ ಹಿರಿಯ ಬ್ಯಾಟ್ಸ್‌ಮನ್ ಆಸಿಫ್ ಅಲಿ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ
ಪಾಕಿಸ್ತಾನ ಪರ 58 ಟಿ20 ಮತ್ತು 21 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಆದರೆ ಈಗ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದಾಗ್ಯೂ, ಅವರು ದೇಶೀಯ ಕ್ರಿಕೆಟ್ ಮತ್ತು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಸಿಫ್ ಅಲಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಒಂದು ಫೋಟೋ ಪೋಸ್ಟ್ ಭಾವನಾತ್ಮಕ ವಿದಾಯದ ಸಂದೇಶ ನೀಡಿದ್ದಾರೆ. ‘ನನ್ನ ಜೀವನದ ಅತ್ಯಂತ ದೊಡ್ಡ ಗೌರವ ಪಾಕಿಸ್ತಾನದ ಜೆರ್ಸಿ ಧರಿಸುವುದು ಮತ್ತು ಕ್ರಿಕೆಟ್ ಮೈದಾನದಲ್ಲಿ ನನ್ನ ದೇಶಕ್ಕಾಗಿ ಆಡುವುದು ಅತ್ಯಂತ ಹೆಮ್ಮೆಯ ಕ್ಷಣ. ನನ್ನ ಅಭಿಮಾನಿಗಳು, ತಂಡದ ಸಹ ಆಟಗಾರರು ಮತ್ತು ತರಬೇತುದಾರರು ನನ್ನ ಪ್ರತಿಯೊಂದು ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ನನ್ನೊಂದಿಗಿದ್ದರು, ಅವರಿಗೆ ಧನ್ಯವಾದಗಳು. ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಧನ್ಯವಾದಗಳು, ಅವರು ನನ್ನ ಸುಖ-ದುಃಖದಲ್ಲಿ ನನ್ನೊಂದಿಗಿದ್ದರು, ಇದರಲ್ಲಿ ವಿಶ್ವಕಪ್ ಸಮಯದಲ್ಲಿ ನನ್ನ ಪ್ರೀತಿಯ ಮಗಳ ನಿಧನವೂ ಸೇರಿದೆ. ನಿಮ್ಮ ಶಕ್ತಿ ನನ್ನನ್ನು ಮುಂದಕ್ಕೆ ಕೊಂಡೊಯ್ದಿದೆ, ನಾನು ಬಹಳ ಹೆಮ್ಮೆಯಿಂದ ನಿವೃತ್ತಿ ಹೊಂದುತ್ತಿದ್ದೇನೆ ಮತ್ತು ದೇಶೀಯ ಮತ್ತು ಪ್ರಪಂಚದಾದ್ಯಂತದ ಲೀಗ್‌ಗಳಲ್ಲಿ ಕ್ರಿಕೆಟ್ ಆಡುವುದನ್ನು ಮುಂದುವರಿಸುತ್ತೇನೆ ಆಸಿಫ್ ಅಲಿ ನಿವೃತ್ತಿ ಪತ್ರ ರವಾನಿಸಿದ್ದಾರೆ. ಇದೀಗ ಆಸಿಫ್ ಅಲಿ ನಿವೃತ್ತಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
ಆಸಿಫ್ ಅಲಿ 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಎರಡು ತಿಂಗಳ ನಂತರ ಅವರು ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಇಲ್ಲಿಯವರೆಗೆ ತಮ್ಮ ವೃತ್ತಿಜೀವನದಲ್ಲಿ 58 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 577 ರನ್ ಗಳಿಸಿದ್ದಾರೆ. ಇದಲ್ಲದೆ, 21 ಏಕದಿನ ಪಂದ್ಯಗಳಲ್ಲಿ ಅವರ ಹೆಸರಿನಲ್ಲಿ 382 ರನ್‌ಗಳಿವೆ.