Saturday, October 18, 2025

ಇ-ಖಾತಾ ಅಧಿಕಾರಿಗಳ ಹುದ್ದೆ ದುರುಪಯೋಗ: ಸಸ್ಪೆಂಡ್​ಗೆ ಡಿಕೆ ಶಿವಕುಮಾರ್​ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗರದಲ್ಲಿ ಸರ್ಕಾರದ ಪಾರದರ್ಶಕತೆ ಮತ್ತು ಮೋಸ ತಡೆಗಾಗಿ ಜಾರಿಗೆ ಬಂದ ಇ-ಖಾತಾ ವ್ಯವಸ್ಥೆಯಲ್ಲಿ ಕೆಲವು ಅಧಿಕಾರಿಗಳು ದುರುಪಯೋಗ ಮಾಡಲು ಮುಂದಾಗಿರುವುದಾಗಿ ಸಾರ್ವಜನಿಕರು ಡಿಸಿಎಂ ಡಿಕೆ ಶಿವಕುಮಾರ್ ಗೆ ದೂರು ನೀಡಿದ್ದಾರೆ.

ಕೆ.ಆರ್.ಪುರಂ ವ್ಯಾಪ್ತಿಯ ಟಿ.ಸಿ.ಪಾಳ್ಯದ ವೆಂಗಯ್ಯ ಇಕೋ ಪಾರ್ಕ್‌ನಲ್ಲಿ ನಡೆದ ನಡಿಗೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಕೆಲವು ನಾಗರಿಕರು ಇ-ಖಾತಾ ಸೌಲಭ್ಯಕ್ಕಾಗಿ ಅಧಿಕಾರಿಗಳು 15,000 ರೂ. ಹಣ ಕೇಳಿದ್ದಾರೆಂದು ದೂರು ನೀಡಿದರು. ಈ ವೇಳೆ ಅಧಿಕಾರಿಗಳ ಹೆಸರು ಹೇಳಿ ಎಂದಿದ್ದಕ್ಕೆ ARO ಬಸವರಾಜ್ ಮತ್ತು ಐ.ಆರ್. ವಿಜನಪುರ ಎನ್ನುವ ಹೆಸರನ್ನು ಹೇಳಿದ್ದಾರೆ. ಡಿಕೆ ಶಿವಕುಮಾರ್ ಅವರು ತಕ್ಷಣ ಈ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವ ಸೂಚನೆ ನೀಡಿದ್ದಾರೆ.

ಇದೇ ಸಂದರ್ಭ, ಪಾರ್ಕ್‌ನಲ್ಲಿ ಅಸಭ್ಯ ವರ್ತನೆ ತೋರುತ್ತಿರುವ ವ್ಯಕ್ತಿಗಳ ಬಗ್ಗೆ ಮಹಿಳೆಯರು ದೂರು ನೀಡಿದರು. ಕೆಲವರು ಶರ್ಟ್ ಬಿಚ್ಚಿಕೊಂಡು ಮಲಗುವುದರಿಂದ ಮಹಿಳೆಯರು ವಾಕಿಂಗ್ ಮಾಡಲು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

error: Content is protected !!