March 12, 2026
Thursday, March 12, 2026
spot_img

ಸ್ವಂತ ಹಣದಲ್ಲಿ ವಿದೇಶ ಪ್ರವಾಸಕ್ಕೆ ತೆರಳಲು ಶಾಸಕರಿಗೆ ಯಾರ ಅನುಮತಿಯೂ ಅಗತ್ಯವಿಲ್ಲ: ಹೊರಟ್ಟಿ

ಹೊಸದಿಗಂತ ವರದಿ ಹಾವೇರಿ :

ಶಾಸಕರು ವಿದೇಶಗಳಿಗೆ ಸರ್ಕಾರದ ವತಿಯಿಂದ ಹೋಗಬೇಕಾದರೆ ಅನುಮತಿ ಕೇಳಬೇಕು, ಸ್ವಂತ ದುಡ್ಡಿನಲ್ಲಿ ಹೋಗುವುದಾದರೆ ಯಾರನ್ನೂ ಕೇಳಬೇಕಾದ ಅಗತ್ಯ ಇಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶಗಳ ಸುಧಾರಣೆ ಮತ್ತು ಪ್ರಗತಿ ಪರಿಶೀಲನೆ ಸಭೆಗೆ ಹಾವೇರಿಗೆ ಆಗಮಿಸಿದ್ದ ವೇಳೆ ಮಂಗಳವಾರ ಸುದ್ದಗಾಋಒಂದಿಗೆ ಮಾತನಾಡಿದ ಅವರು, ಭೋಜೇಗೌಡರು ದಕ್ಷಿಣ ಆಫ್ರಿಕಾಗೆ ಹೊರಟಿದ್ದಾರೆ. ಅಸೆಂಬ್ಲಿಯವರು ಎಲ್ಲಾ ಸೇರಿ 22 ಜನ ಏನೋ‌ ಹೊರಟಿದಾರೆ. ಭೋಜೇಗೌಡ ಅವರು ಅನುಮತಿ ಕೇಳಿದಾರೆ. ಉಳಿದವರು ಅನುಮತಿ ಕೇಳಿದರೆ ಫೈಲ್ ಬರಲಿ ಪರಿಶೀಲನೆ ಮಾಡುತ್ತೇನೆ ಎಂದರು.

ಶಾಸಕರು ವೈಯಕ್ತಿಕವಾಗಿ ಹೋಗುವುದಾದರೆ ಅನುಮತಿ ಪಡೆಯು ಅಗತ್ಯ ಇಲ್ಲ, ಸರ್ಕಾರದ ದುಡ್ಡಿನಲ್ಲಿ ಹೋಗೋದಾದರೆ ಅನುಮತಿ ಪಡೆಯಬೇಕು ಎಂದು ಪುನರುಚ್ಛರಿಸಿದರು.

ಶಿಕ್ಷಕಕರ ನೇಮಕಾತಿ ಆಗುತ್ತಿಲ್ಲ, 29000 ಹುದ್ದೆ ಖಾಲಿ ಇವೆ, ಅವನ್ನು ತುಂಬಬೇಕು. ಈ ಕುರಿತು ನಾನು ಸಭೆ ಕರೆಯುತ್ತೇನೆ. ಇದೇ ಅಧಿವೇಶನದಲ್ಲಿ ಮೀಟಿಂಗ್ ಕರೆಯಬೇಕು. ಒಂದು ಕ್ಲಾಸಿಗೊಬ್ಬ ಶಿಕ್ಷಕ ಕೊಡುವಂತಹ ಕೆಲಸ ಮಾಡಬೇಕು. ಈ ಕುರಿತು ಶಿಕ್ಷಣ ಇಲಾಖೆ ಸಚಿವರಿಗೆ ಕೇಳುತ್ತೇನೆ. ಇಲ್ಲದಿದ್ದರೆ ಎಸ್ಸೆಸ್ಸೆಲ್ಸಿ ರಿಸಲ್ಟ್ ಹೇಗೆ ಕೇಳ್ತೀರಿ? ಎಸ್ಸೆಸ್ಸೆಲ್ಸಿ ಫಲಿತಾಂಶ ಕೇಳಲು ಯಾವ ನೈತಿಕತೆ ಇದೆ? ಎಂದು ಪ್ರಶ್ನಸಿದ ಅವರು, ಈ ಬಗ್ಗೆ ಸಿಎಂ ಜೊತೆಗೂ ಮಾತಾಡುತ್ತೇನೆ. ಸರ್ಕಾರ ಎಲ್ಲಾ ನ್ಯೂನತೆ ಸರಿ ಪಡಿಸಲಿ. ಎಮ್ಮೆಯನ್ನು ನೀರಲ್ಲಿ ಮಲಗಿಸಿ ಬೆಲೆ‌ ಕಟ್ಟೋದು ಬೇಡ ಎಂದು ಮಾರ್ಮಿಕವಾಗಿ ನುಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !