Thursday, December 18, 2025

ಇಥಿಯೋಪಿಯಾಗೆ ಬಂದಿಳಿದ ಮೋದಿ: ತಾವೇ ಖುದ್ದು ಕಾರು ಚಲಾಯಿಸಿ ಕರೆದುಕೊಂಡು ಹೋದ ಪ್ರಧಾನಿ ಅಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಥಿಯೋಪಿಯಾ ಪ್ರಧಾನಿ ಅಬಿ ಅಹ್ಮದ್ ಅಲಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಇಥಿಯೋಪಿಯಾ ಭೇಟಿಗಾಗಿ ಇಂದು ಅಡಿಸ್ ಅಬಾಬಾಗೆ ಬಂದಿಳಿದರು.

ಈ ವೇಳೆ ಇಥಿಯೋಪಿಯಾದ ಪ್ರಧಾನಿ ಅಬಿಯ್ ಅಹ್ಮದ್ ಅಲಿ ಮೋದಿ ಅವರನ್ನು ಅಡಿಸ್ ಅಬಾಬಾ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದಾರೆ. ಬಳಿಕ ತಾವೇ ಕಾರು ಚಲಾಯಿಸಿಕೊಂಡು ಹೋಟೆಲ್‌ಗೆ ಕರೆದೊಯ್ಯುವ ಮೂಲಕ ಪ್ರಧಾನಿ ಮೋದಿಯವರಿಗೆ ವಿಶೇಷ ಆತಿಥ್ಯ ನೀಡಿದ್ದಾರೆ.

ಮಾರ್ಗಮಧ್ಯೆ ಅವರು ಪ್ರಧಾನಿ ಮೋದಿಯನ್ನು ವಿಜ್ಞಾನ ವಸ್ತುಸಂಗ್ರಹಾಲಯ ಮತ್ತು ಸ್ನೇಹ ಉದ್ಯಾನವನಕ್ಕೆ ಕರೆದೊಯ್ದರು.

error: Content is protected !!