March 22, 2026
Sunday, March 22, 2026
spot_img

ಉಗ್ರರ ಬುಡಕ್ಕೆ ಮೋದಿ ಸರಕಾರದ ಏಟು: ದೇಶದ ಮೊದಲ ಆ್ಯಂಟಿ ಟೆರರ್ ಪಾಲಿಸಿ ‘ಪ್ರಹಾರ್’ ರಿಲೀಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರವು ದೇಶದ ಮೊಟ್ಟಮೊದಲ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ನೀತಿ ‘ಪ್ರಹಾರ್’ (Prahaar) ಅನ್ನು ಅನಾವರಣಗೊಳಿಸಿದೆ .

ಈ ನೀತಿಯು ಭಾರತವು ಸಾಂಪ್ರದಾಯಿಕ ಭಯೋತ್ಪಾದನೆಯನ್ನು ಮಾತ್ರವಲ್ಲದೆ ಸೈಬರ್ ದಾಳಿಗಳು, ಡಾರ್ಕ್ ವೆಬ್ ಮತ್ತು ಡ್ರೋನ್‌ಗಳಂತಹ ಅತ್ಯಾಧುನಿಕ ಸವಾಲುಗಳನ್ನು ಸಹ ಎದುರಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ.

ಕೇಂದ್ರ ಗೃಹ ಸಚಿವಾಲಯವು ಭಯೋತ್ಪಾದನಾ ವಿರೋಧಿ ನೀತಿ ಪ್ರಹಾರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ನೀತಿಯು ಗಡಿಯಾಚೆಗಿನ ಭಯೋತ್ಪಾದನೆಯನ್ನು ಮಾತ್ರವಲ್ಲದೆ ಆಧುನಿಕ ಯುಗದ ಸಂಕೀರ್ಣ ಡಿಜಿಟಲ್ ಮತ್ತು ತಾಂತ್ರಿಕ ಬೆದರಿಕೆಗಳನ್ನು ಸಹ ಎದುರಿಸಲು ಒಂದು ಮಾಸ್ಟರ್ ಪ್ಲಾನ್ ಆಗಿದೆ.

ಡಿಜಿಟಲ್ ಲೋಕದ ಅಪಾಯಗಳಿಂದ ಹಿಡಿದು ಡ್ರೋನ್ ದಾಳಿಗಳವರೆಗೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಲು ಈ ಹೊಸ ಸಮರ ತಂತ್ರವನ್ನು ರೂಪಿಸಿದೆ.

“ಪ್ರಹಾರ್” ನೀತಿ ದೇಶದ ಪ್ರಮುಖ ಆರ್ಥಿಕ ವಲಯಗಳಾದ ವಿದ್ಯುತ್, ರೈಲ್ವೆ, ವಾಯುಯಾನ, ಬಂದರುಗಳು, ರಕ್ಷಣೆ, ಬಾಹ್ಯಾಕಾಶ ಮತ್ತು ಪರಮಾಣು ಇಂಧನವನ್ನು ರಕ್ಷಿಸಲು ವಿಶೇಷ ಕಾರ್ಯವಿಧಾನಗಳ ಅಭಿವೃದ್ಧಿಗೆ ಇದು ಒತ್ತು ನೀಡುತ್ತದೆ.

ಭಯೋತ್ಪಾದಕ ದಾಳಿಗಳ ತಡೆಗಟ್ಟುವಿಕೆ, ತ್ವರಿತ ಮತ್ತು ಸೂಕ್ತ ಪ್ರತಿಕ್ರಿಯೆ, ಆಂತರಿಕ ಸಾಮರ್ಥ್ಯಗಳ ಕ್ರೋಢೀಕರಣ, ಮಾನವ ಹಕ್ಕುಗಳು ಮತ್ತು ಕಾನೂನಿನ ಪಾಲನೆ, ಉಗ್ರಗಾಮಿ ಪ್ರವೃತ್ತಿ ತಡೆಗಟ್ಟುವಿಕೆ, ಅಂತರಾಷ್ಟ್ರೀಯ ಸಹಕಾರ ಮತ್ತು ಸಮಾಜದ ಚೇತರಿಕೆ ಎಂಬ ಏಳು ಪ್ರಮುಖ ಅಂಶಗಳನ್ನು ಆಧರಿಸಿದೆ.

ಪ್ರಹಾರ್​ನ ಪ್ರಮುಖ ಅಂಶವೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಏಜೆನ್ಸಿಗಳ ನಡುವೆ ಹೆಚ್ಚಿನ ಸಮನ್ವಯತೆಯನ್ನು ಸಾಧಿಸುವ ಮೂಲಕ ದೇಶಾದ್ಯಂತ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ ಏಕರೂಪತೆಯನ್ನು ತರುವ ಗುರಿಯನ್ನು ಇದು ಹೊಂದಿದೆ.

ಭಯೋತ್ಪಾದನೆಗೆ ಯಾವುದೇ ಧರ್ಮ, ಜಾತಿ ಅಥವಾ ರಾಷ್ಟ್ರೀಯತೆ ಇಲ್ಲ ಎಂದು ಹೇಳುವ ಈ ನೀತಿಯು 2029ರ ವೇಳೆಗೆ ದೇಶದಲ್ಲಿ ಭಯೋತ್ಪಾದನೆಯನ್ನಯ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !