Saturday, September 20, 2025

‘ಪ್ರತಿ ಆಸನದಲ್ಲೂ ಮೋದಿ’…ಇಂಗ್ಲೆಂಡ್​​ನ ಸಂಸದರಿಂದ ‘ಮಾಸ್ಕ್’ ಧರಿಸಿ ಹುಟ್ಟುಹಬ್ಬ ಆಚರಣೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬವನ್ನು ಬುಧವಾರ ಇಂಗ್ಲೆಂಡ್​​ನ ಹೌಸ್ ಆಫ್ ಕಾಮನ್ಸ್‌ನಲ್ಲಿ ಸಮುದಾಯದ ಮುಖಂಡರು, ಆಧ್ಯಾತ್ಮಿಕ ವ್ಯಕ್ತಿಗಳು ಮತ್ತು ಸಂಸದರು ಆಚರಿಸಿದರು.

ಈ ವೇಳೆ ಅಲ್ಲಿನ ಸಂಸದರು ಮೋದಿಯ ಮಾಸ್ಕ್ ಧರಿಸಿ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

“ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಆಚರಣೆಯನ್ನು ಸಂಸತ್ತಿನ ಸದನದಲ್ಲಿ ಆಯೋಜಿಸಿದ್ದು ನನಗೆ ಸಂತೋಷವಾಯಿತು” ಎಂದು ಬ್ರಿಟಿಷ್ ಸಂಸದ ಬಾಬ್ ಬ್ಲಾಕ್​ಮನ್ ಎಕ್ಸ್​ನಲ್ಲಿ ಬರೆದಿದ್ದಾರೆ. ಹಾಗೇ, ಆ ಕಾರ್ಯಕ್ರಮದ ಫೋಟೋಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ.

https://x.com/BobBlackman/status/1968582593948823797?ref_src=twsrc%5Etfw%7Ctwcamp%5Etweetembed%7Ctwterm%5E1968582593948823797%7Ctwgr%5E44f7e2f660714dd2a756c935dab843ad73fb4c97%7Ctwcon%5Es1_&ref_url=https%3A%2F%2Ftv9kannada.com%2Fworld%2Fbritish-mp-bob-blackman-hosts-pm-modis-75th-birthday-at-house-of-commons-attendees-wear-modi-masks-1082474.html

ಕನ್ಸರ್ವೇಟಿವ್ ಪಕ್ಷದ ನಾಯಕ ಅಂತಾರಾಷ್ಟ್ರೀಯ ಸಿದ್ಧಾಶ್ರಮ ಶಕ್ತಿ ಕೇಂದ್ರ ಯುಕೆ (ಹಿಂದೂ ಆಧ್ಯಾತ್ಮಿಕ ಸಂಸ್ಥೆ), ಗರವಿ ಗುಜರಾತ್ (ಗುಜರಾತಿ-ಇಂಗ್ಲಿಷ್ ವಾರಪತ್ರಿಕೆ) ಮತ್ತು ಈಸ್ಟರ್ನ್ ಐ (ಬ್ರಿಟಿಷ್-ಏಷ್ಯನ್ ಪತ್ರಿಕೆ) ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಸಿದ್ಧಾಶ್ರಮದ ತಂಡದ ಸಾಂಸ್ಕೃತಿಕ ಪ್ರದರ್ಶನಗಳನ್ನು ಒಳಗೊಂಡಿತ್ತು. ಇದರಲ್ಲಿ ಭಾಗವಹಿಸುವವರು ಪ್ರಧಾನಿ ಮೋದಿ ಅವರ ಮುಖವನ್ನು ಮುದ್ರಿಸಿದ ಮಾಸ್ಕ್ ಧರಿಸಿದ್ದರು. ಆಯೋಜಕರು ಇದನ್ನು ಯುಕೆ ಸಂಸತ್ತಿನ ಒಳಗೆ ಸಾಂಕೇತಿಕವಾಗಿ ‘ಪ್ರತಿ ಆಸನದಲ್ಲೂ ಮೋದಿ’ ಶೋ ಎಂದು ಬಣ್ಣಿಸಿದ್ದಾರೆ.

ಕಳೆದ ಜೂನ್‌ನಲ್ಲಿ, ಸಂಸದ ಬ್ಲ್ಯಾಕ್‌ಮನ್ ಪಾಕಿಸ್ತಾನವನ್ನು “ವಿಫಲ ರಾಷ್ಟ್ರ” ಎಂದು ಕರೆದಿದ್ದರು. ಪಾಕಿಸ್ತಾನ ನಿಜವಾಗಿಯೂ ಪ್ರಜಾಪ್ರಭುತ್ವದಿಂದ ಆಳಲ್ಪಡುತ್ತಿದೆಯೇ ಅಥವಾ ಮಿಲಿಟರಿಯಿಂದ ಆಳಲ್ಪಡುತ್ತಿದೆಯೇ ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ