ಹೊಸದಿಗಂತ ಡಿಜಿಟಲ್ ಡೆಸ್ಕ್:
98ನೇ ವಸಂತಕ್ಕೆ ಕಾಲಿಟ್ಟ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಶುಭ ಹಾರೈಸಿದ್ದಾರೆ.
ಅಡ್ವಾಣಿಯವರು ಒಬ್ಬ ಮೇದಾವಿ ರಾಜಕಾರಣಿಯಾಗಿದ್ದಾರೆ. ಅವರ ಜೀವನ ಭಾರತದ ಪ್ರಗತಿಗಾಗಿ ಸಮರ್ಪಿತವಾಗಿದೆ. ದೇಶಕ್ಕಾಗಿ ಅವರು ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಎಂದು ಅವರ ಸೇವೆಯನ್ನು ಸ್ಮರಿಸಿದ್ದಾರೆ.
ಅವರ ಕೊಡುಗೆಗಳು ಭಾರತದ ಪ್ರಜಾಪ್ರಭುತ್ವ ಮತ್ತು ಸಾಂಸ್ಕೃತಿಕ ಕೇತ್ರದಲ್ಲಿ ಅಳಿಸಲಾಗದ ಗುರುತನ್ನು ಉಳಿಸಿವೆ. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಸಿಗಲಿ ಎಂದು ಪ್ರಧಾನಿಗಳು ಹಾರೈಸಿದ್ದಾರೆ.
98ನೇ ವಸಂತಕ್ಕೆ ಕಾಲಿಟ್ಟ ಎಲ್.ಕೆ.ಅಡ್ವಾಣಿಗೆ ಶುಭ ಹಾರೈಸಿದ ಮೋದಿ

