March 13, 2026
Friday, March 13, 2026
spot_img

ಮೋನಾಲಿಸಾ–ಫರ್ಮನ್ ಖಾನ್ ವಿವಾಹ: ಪ್ರೆಸ್ ಮೀಟ್ ನಲ್ಲಿ ನವಜೋಡಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾಕುಂಭ ಮೇಳದ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಗಮನ ಸೆಳೆದಿದ್ದ ಮೋನಾಲಿಸಾ ಇದೀಗ ತಮ್ಮ ಮದುವೆ ವಿಚಾರದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ದೀರ್ಘಕಾಲದ ಸ್ನೇಹಿತ ಫರ್ಮನ್ ಖಾನ್ ಜೊತೆ ಕೇರಳದ ಅರುಮನೂರು ದೇವಸ್ಥಾನದಲ್ಲಿ ಹಿಂದು ಸಂಪ್ರದಾಯದಂತೆ ಮದುವೆಯಾಗಿರುವುದಾಗಿ ಅವರು ತಿಳಿಸಿದ್ದಾರೆ.

ಮದುವೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಟೀಕೆಗಳು ಹಾಗೂ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ನವ ದಂಪತಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಅಂತರ್ಧರ್ಮೀಯ ವಿವಾಹದ ಹಿನ್ನೆಲೆಯಲ್ಲಿ ಕೇಳಿಬಂದ ‘ಲವ್ ಜಿಹಾದ್’ ಹಾಗೂ ಧಾರ್ಮಿಕ ಮತಾಂತರದ ಆರೋಪಗಳನ್ನು ಇಬ್ಬರೂ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ಇದನ್ನೂ ಓದಿ:

ಮೋನಾಲಿಸಾ ಮಾತನಾಡಿ, ನಾವು ಹಿಂದು ಸಂಪ್ರದಾಯದಂತೆ ಮದುವೆಯಾದೆವು. ಈ ನಿರ್ಧಾರ ನನ್ನದೇ ಆಗಿತ್ತು ಎಂದು ಹೇಳಿದರು. ತಮ್ಮ ಕುಟುಂಬದವರು ಈ ಮದುವೆಗೆ ಒಪ್ಪಿರಲಿಲ್ಲ ಹಾಗೂ ಬೇರೆ ಸಂಬಂಧಿಕರೊಂದಿಗೆ ಮದುವೆ ಮಾಡಲು ಯತ್ನಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಇತ್ತ ಫರ್ಮನ್ ಖಾನ್ ಕೂಡ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಧರ್ಮಾಂತರದ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಮೊನಾಲಿಸಾ ಹಿಂದು ಆದ ಕಾರಣ ಅವರ ಇಚ್ಛೆಯಂತೆ ಹಿಂದು ಸಂಪ್ರದಾಯದಲ್ಲಿ ಮದುವೆಯಾದೆ ಎಂದು ಹೇಳಿದರು. ನಾವು ಪರಸ್ಪರದ ನಂಬಿಕೆಗಳನ್ನು ಗೌರವಿಸುತ್ತೇವೆ ಮತ್ತು ಯಾವುದೇ ಧರ್ಮವನ್ನು ಬದಲಾಯಿಸುವ ಉದ್ದೇಶವಿಲ್ಲ ಎಂದು ದಂಪತಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !