Saturday, October 18, 2025

ಬಿಹಾರ ಟಿಕೆಟ್‌ಗೆ ‘ಹಣವೇ ಮಾನದಂಡ’: 55 ವರ್ಷಗಳ ಹೋರಾಟಕ್ಕೆ ಕಣ್ಣೀರಿನ ವಿದಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ನಾಯಕ ಅಭಯ್ ಕುಮಾರ್ ಸಿಂಗ್ ಅವರು ಕ್ಯಾಮೆರಾ ಎದುರು ಕಣ್ಣೀರಿಟ್ಟ ಘಟನೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಸಮಷ್ಟಿಪುರ ಜಿಲ್ಲೆಯ ಮೋರ್ವಾ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಲ್ಪಟ್ಟ ಸಿಂಗ್, ಪಕ್ಷದ ಹಿರಿಯ ನಾಯಕರ ವಿರುದ್ಧ ಪಕ್ಷಪಾತ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದಾರೆ. “ನನಗಿಂತ ಹೆಚ್ಚು ಹಣ ಕೊಟ್ಟವರಿಗೆ ಟಿಕೆಟ್ ಸಿಕ್ಕಿದೆ” ಎಂದು ಆರೋಪಿಸಿದ ಅವರು, ದುಃಖತಪ್ತರಾಗಿ ತಾವು ರಾಜಕೀಯವನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ.

ಸುಮಾರು 55 ವರ್ಷಗಳ ರಾಜಕೀಯ ಹೋರಾಟದ ತಮ್ಮ ಪ್ರಯಾಣವನ್ನು ನೆನಪಿಸಿಕೊಂಡ ಸಿಂಗ್, “ನಾನು 25 ವರ್ಷಗಳ ಕಾಲ ಹೋರಾಡಿದೆ, ನಂತರ 30 ವರ್ಷಗಳ ಕಾಲ ಮತ್ತೆ ಚುನಾವಣೆಗಳಲ್ಲಿ ಹೋರಾಡಿದೆ. ಈ ಟಿಕೆಟ್ ವ್ಯವಸ್ಥೆಯಿಂದ ನನಗೆ ತೊಂದರೆಯಾಗಿದೆ. ಈ ಹೋರಾಟದಿಂದ ಮುಕ್ತನಾಗಲು ಬಯಸುತ್ತೇನೆ. ನನ್ನಿಂದಾದ ತಪ್ಪುಗಳಿಗೆ ಎಲ್ಲರೂ ನನ್ನನ್ನು ಕ್ಷಮಿಸಬೇಕು” ಎಂದು ಮನವಿ ಮಾಡಿ, ತಾವು ಇನ್ನು ಮುಂದೆ ಜನಸೇವೆ ಮಾಡಲು ಅಸಮರ್ಥ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

error: Content is protected !!