Thursday, December 25, 2025

ಮೈಸೂರು ಝೂನಲ್ಲಿ ಅನಾರೋಗ್ಯದಿಂದ ಪ್ರಾಣಬಿಟ್ಟ ʼತಾಯಮ್ಮʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಹೆಣ್ಣು ಹುಲಿ ಮೃತಪಟ್ಟಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಮ್ಮ ಪ್ರಾಣಬಿಟ್ಟಿದೆ. 

ತಾಯಮ್ಮಗೆ 4 ವರ್ಷದ 10 ತಿಂಗಳ ಆಗಿತ್ತು. 2021ರಲ್ಲಿ ಬಂಡೀಪುರದಿಂದ ರಕ್ಷಿಸಿ ಮೈಸೂರಿಗೆ ತರಲಾಗಿತ್ತು. ಇತ್ತೀಚೆಗೆ ಅನಾರೋಗ್ಯದಿಂದ ಆಹಾರ ತ್ಯಜಿಸಿತ್ತು. ಚಿಕಿತ್ಸೆ ನಡುವೆಯೂ ಆರೋಗ್ಯ ಸ್ಥಿತಿ ಗಂಭೀರವಾಗುತ್ತಲೇ ಹೋಗಿತ್ತು. 

ಕೊನೆಗೂ ಚಿಕಿತ್ಸೆ ಫಲಿಸದೇ ಹುಲಿ ಮೃತಪಟ್ಟಿದೆ ಎಂದು ಮೈಸೂರು ಮೃಗಾಲಯ ಅಧಿಕೃತವಾಗಿ ಮಾಹಿತಿ ನೀಡಿದೆ. ಮೈಸೂರು ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ತಾಯಮ್ಮನ ದರ್ಶನ್ ಇನ್ಮುಂದೆ ಸಿಗೋದಿಲ್ಲ. 

error: Content is protected !!