January20, 2026
Tuesday, January 20, 2026
spot_img

‘ಮದರ್ ಆಫ್ ಆಲ್ ಡೀಲ್’: ಭಾರತ ಜೊತೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಜ್ಜಾದ ಯುರೋಪಿಯನ್ ಒಕ್ಕೂಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ(FTA)ವನ್ನು ಅಂತಿಮಗೊಳಿಸುವ ಹಂತಕ್ಕೆ ತಲುಪಿದೆ.

ಸ್ವಿಜರ್ಲ್ಯಾಂಡ್‌ನ ದಾವೋಸ್‌ನಲ್ಲಿ (Davos) ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಮಾತನಾಡಿದ ಯೂರೋಪ್ ಒಕ್ಕೂಟದ ಮುಖ್ಯಸ್ಥೆ ಉರ್ಸುಲಾ ವನ್ ಡರ್ ಲೆಯಾನ್ (Ursula von der Leyen) ಮಾತನಾಡಿ, ಮುಂದಿನ ವಾರಾಂತ್ಯದಲ್ಲಿ ದಾವೋಸ್ ಬಳಿಕ ನಾನು ಭಾರತಕ್ಕೆ ಪ್ರಯಾಣಿಸುತ್ತೇನೆ. ಇನ್ನೂ ಮಾಡಲು ಕೆಲಸವಿದೆ, ಆದರೆ ನಾವು ಐತಿಹಾಸಿಕ ವ್ಯಾಪಾರ ಒಪ್ಪಂದ ಮಾಡುವ ಅಂತಿಮ ಹಂತದಲ್ಲಿದ್ದೇವೆ. ಇದನ್ನು ಕೆಲವರು ಎಲ್ಲಾ ಒಪ್ಪಂದಗಳ ತಾಯಿ ಎಂದು ಕರೆಯುತ್ತಾರೆ ಎಂದು ಬಣ್ಣಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವದ ವಿವಿಧ ದೇಶಗಳ ವಿರುದ್ಧ ಸುಂಕ ಸಮರ ಸಾರಿದ್ದು ಹುಚ್ಚು ದೊರೆಯ ಹುಚ್ಚಾಟಕ್ಕೆ ಭಾರತದಂತ ದೇಶಗಳು ಎಫ್ ಟಿಎ ಮೂಲಕ ತಿರುಗೇಟು ನೀಡಲು ಸಜ್ಜಾಗಿವೆ.

ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ವಾನ್ ಡೆರ್ ಲೇಯೆನ್ ಅವರು ಜನವರಿ 25 ರಿಂದ 27 ರವರೆಗೆ ಭಾರತದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.

ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು, ಯುರೋಪಿಯನ್ ಒಕ್ಕೂಟವು ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸುವ ಹಂತದಲ್ಲಿದೆ. ಈ ಡೀಲ್​​ “ಒಪ್ಪಂದಗಳ ಮಹಾತಾಯಿ” ಇದ್ದಂತೆ ಎಂದು ಬಣ್ಣಿಸಿದರು.

ಜನವರಿ 27 ರಂದು ನಡೆಯಲಿರುವ ಭಾರತ-EU ಶೃಂಗಸಭೆಯಲ್ಲಿ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಅಂತಿಮವಾಗಲಿದ್ದು, ಇದನ್ನು ಎರಡೂ ಕಡೆಯವರು ಘೋಷಿಸಲಿದ್ದಾರೆ.

‘ನಾನು ಭಾರತಕ್ಕೆ ಪ್ರಯಾಣಿಸುತ್ತಿದ್ದೇನೆ. ಇನ್ನೂ ನಾವು ಮಾಡಬೇಕಾದ ಕೆಲಸಗಳಿವೆ. ಆದರೆ ನಾವು ಒಂದು ಐತಿಹಾಸಿಕ ವ್ಯಾಪಾರ ಒಪ್ಪಂದದ ಅಂಚಿನಲ್ಲಿದ್ದೇವೆ. ಕೆಲವರು ಇದನ್ನು ಎಲ್ಲಾ ಒಪ್ಪಂದಗಳ ಮಹಾತಾಯಿ ಎಂದು ಕರೆಯುತ್ತಾರೆ. ಇದು 2 ಬಿಲಿಯನ್ ಜನರ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ. ಇದು ಜಾಗತಿಕ GDP ಯ ಸುಮಾರು ಕಾಲು ಭಾಗದಷ್ಟಿದೆ’ ಎಂದು ಲೇಯೆನ್ ಹೇಳಿದರು.

Must Read