Tuesday, October 28, 2025

ಸಂಸದ ಯದುವೀರ್ ಒಡೆಯರ್ ತಾತ ಮದನ್ ಗೋಪಾಲ್ ರಾಜ್ ಅರಸ್ ವಿಧಿವಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಂಸದ, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ತಾತ ಮದನ್ ಗೋಪಾಲ್ ರಾಜ್ ಅರಸ್ (93) ಅವರು ವಯೋಸಹಜ ಅನಾರೋಗ್ಯದಿಂದ ನಗರದ ಲಕ್ಷ್ಮೀಪುರಂ ನಿವಾಸದಲ್ಲಿ ವಿಧಿವಶರಾಗಿದ್ದಾರೆ.

ಇವರು ಯದುವೀರ್ ಅವರ ಪೂರ್ವಾಶ್ರಮದ ತಂದೆ ಸ್ವರೂಪ್ ಗೋಪಾಲ ರಾಜ್ ಅರಸ್ ಅವರ ತಂದೆಯಾಗಿದ್ದಾರೆ.

ಚಾಮುಂಡಿ ಬೆಟ್ಟದ ತಪ್ಪಲಿನ ಅರಸು ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿದೆ.ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು, ಸ್ನೇಹಿತರು, ಹಿತೈಷಿಗಳು ಭಾಗಿಯಾಗಿದ್ದರು.

ತಾತ ನಿಧನರಾದ ಹಿನ್ನೆಲೆಯಲ್ಲಿ ಸಂಸದ ಯದುವೀರ್ ಅಧಿಕೃತ ಕಾರ್ಯಕ್ರಮಗಳು ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ.

error: Content is protected !!