April 9, 2026
Thursday, April 9, 2026
spot_img

ಮದುವೆ ಯಾವಾಗ? ಅಂತ ಕೇಳೋರಿಗೆ ಡೇಟ್ ಕೊಟ್ಟ ಮೃಣಾಲ್ ಠಾಕೂರ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಮೃಣಾಲ್ ಠಾಕೂರ್ ಹಾಗೂ ನಟ ಧನುಶ್ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಲ್ಲಿದೆ. ಫೆಬ್ರವರಿ 14ರಂದು ಇವರ ವಿವಾಹ ನಡೆಯಲಿದೆ ಎಂಬ ಮಾತು ಕೂಡ ಕೇಳಿಬಂದಿತ್ತು. ಆದರೆ ಈ ವಿಷಯವನ್ನು ಇಬ್ಬರೂ ಅಧಿಕೃತವಾಗಿ ಹೇಳಿಲ್ಲ. ಒಟ್ಟಿಗೆ ಕಾಣಿಸಿಕೊಂಡ ಕೆಲವು ಸಂದರ್ಭಗಳು ಮತ್ತು ಫೋಟೋಗಳು ಈ ವದಂತಿಗೆ ಕಾರಣವಾಗಿದ್ದವು.

ಇದೀಗ ಒಂದು ಸಂದರ್ಶನದಲ್ಲಿ ಮಾತನಾಡಿದ ಮೃಣಾಲ್, ಈ ಸುದ್ದಿಗೆ ಹಾಸ್ಯಭರಿತವಾಗಿ ಉತ್ತರ ನೀಡಿದ್ದಾರೆ. “ಫೆಬ್ರವರಿ 14 ಅಲ್ಲ, ಏಪ್ರಿಲ್ 14 ಕೂಡ ಅಲ್ಲ. ನನ್ನ ಮದುವೆ ಏಪ್ರಿಲ್ 1ರಂದು ನಡೆಯುತ್ತದೆ, ಏಕೆಂದರೆ ಅದು ಮೂರ್ಖರ ದಿನ” ಎಂದು ಅವರು ನಗುತ್ತಾ ಹೇಳಿದರು.

ಇದನ್ನೂ ಓದಿ:

ಮದುವೆ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದೂ, ಸರಿಯಾದ ಸಮಯ ಬಂದಾಗ ತಾನೇ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಘೋಷಣೆ ಮಾಡುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ದೋ ದೀವಾನೆ ಶೆಹೆರ್ ಮೇ ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ಜೊತೆ ಅಭಿನಯಿಸಿರುವ ಮೃಣಾಲ್, ಫೆಬ್ರವರಿ 20ರಂದು ಬಿಡುಗಡೆಯಾಗಲಿರುವ ಈ ಸಿನಿಮಾದತ್ತ ಗಮನ ಹರಿಸಿದ್ದಾಗಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !