ಹೊಸದಿಗಂತ ವರದಿ, ಮಂಗಳೂರು:
ಸೆಂಟ್ರಲ್ ವೇರ್ ಹೌಸಿಂಗ್ ಕಾರ್ಪೋರೇಶನ್ (ಸಿಡಬ್ಲ್ಯೂಸಿ) ಮಹತ್ವದ ಸಾಧನೆ ಮಾಡಿದ್ದು, ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್)ನ ಪಾಲಿಪ್ರೊಪಿಲಿನ್ ಸರಕನ್ನು ಹೊತ್ತ ಮೊದಲ ಕಂಟೈನರ್ ರೇಕ್ ಅನ್ನು ಮಂಗಳೂರಿನ ತೋಕೂರಿನಿಂದ ಗುಜರಾತ್‌ನ ಮೋರ್ಬಿಗೆ ಯಶಸ್ವಿಯಾಗಿ ಸಾಗಿಸಿದೆ.
ಈ ಸಂಬಂಧ ಎಂಆರ್‌ಪಿಎಲ್ ಮತ್ತು ಸಿಡಬ್ಲ್ಯೂಸಿ ನಡುವೆ ಒಪ್ಪಂದವೊಂದ ಮಾಡಲಾಗಿದ್ದು,ಮಂಗಳೂರಿನಿಂದ ಮೋರ್ಬಿಗೆ ಪಾಲಿಪ್ರೊಪಿಲಿನ್ ಸಾಗಣೆಗಾಗಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ತೋಕೂರಿನಲ್ಲಿ ಪಾಲಿಪ್ರೊಪಿಲಿನ್ ಚೀಲಗಳನ್ನು ಕಂಟೈನರ್‌ಗಳಿಗೆ ತುಂಬುವುದು, ಕೊಂಕಣ ರೈಲ್ವೆ ನಿಗಮದ ರೈಲು ಜಾಲದ ಮೂಲಕ ಸಾರಿಗೆ, ಮೋರ್ಬಿಯಲ್ಲಿ ಸಂಗ್ರಹಣೆ ಹಾಗೂ ಮುಂದಿನ ವಿತರಣೆಗೆ ಡಿ-ಸ್ಟಫಿಂಗ್ ಪ್ರಕ್ರಿಯೆಗಳು ಒಳಗೊಂಡಿವೆ.
ಈ ಐತಿಹಾಸಿಕ ಕಂಟೈನರ್ ರೇಕ್‌ಗೆ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಸಿನ್ಹಾ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಿಡಬ್ಲ್ಯೂಸಿ ನಿರ್ದೇಶಕರಾದ ಸ್ಯಾಮುವೆಲ್ ಪ್ರವೀಣ್ ಕುಮಾರ್ ನೀರಜ್ ಪ್ರಿಯದರ್ಶಿ ಉಪಸ್ಥಿತರಿದ್ದರು.
ಎಂರ್‌ಪಿಎಲ್ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್, ನಿರ್ದೇಶಕರಾದ ನಂದಕುಮಾರ್ ವೇಲಾಯುಧನ್ ಪಿಳ್ಳೈ , ದೇವೇಂದ್ರ ಕುಮಾರ್, ಡಾ.ದೀಪಕ್ ಪ್ರಭಾಕರ್ ಪಿ.ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



