ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುಟುಂಬದ ವಿರುದ್ಧದ ಮುಡಾ ಹಗರಣ ಪ್ರಕರಣದ ತನಿಖೆ ಮತ್ತೊಮ್ಮೆ ಚುರುಕುಗೊಳಿಸಿದೆ. ಮುಡಾದಲ್ಲಿ ಅಕ್ರಮವಾಗಿ ಹಂಚಿಕೆ ಮಾಡಿದ್ದ 252 ಸೈಟ್ ಗಳನ್ನು ಇದೀಗ ಇ.ಡಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
440 ಕೋಟಿ ರೂ. ಮೌಲ್ಯದ ನಿವೇಶನಗಳು ಎಂದು ಇಡಿ ಖಾತರಿ ಪಡಿಸಿದೆ. ಮುಡಾದ ಮಾಜಿ ಆಯುಕ್ತ ದಿನೇಶ್ ಕುಮಾರ್ ಬಂಧನದ ಬಳಿಕ ಅವರ ಬಳಿಯಲ್ಲಿದ್ದ 34 ಸೈಟ್‌ಗಳನ್ನ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಕುಟುಂಬದವರು ಮತ್ತು ಮನೆ ಕೆಲಸದವರ ಹೆಸರಲ್ಲೂ ಕೂಡ ಬೇನಾಮಿ ಮಾಡಿದ್ದನ್ನು ಪತ್ತೆ ಮಾಡಿರೋ ಇಡಿ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಬೇನಾಮಿ ಹೆಸರಲ್ಲಿ ಇದ್ದವರನ್ನೆಲ್ಲಾ ವಿಚಾರಣೆ ನಡೆಸಿರೋ ಇಡಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.

                                    