March 26, 2026
Thursday, March 26, 2026
spot_img

ಮುಡಾ| 300 ಎಕರೆ ಜಮೀನಿನಲ್ಲಿ ಹೊಸದಾಗಿ ಲೇಔಟ್‌ ಅಭಿವೃದ್ಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ನಾಗರೀಕರಿಗೆ ನಿವೇಶನ ನೀಡುವ ಸಂಬಂಧ ಮೈಸೂರಿನಲ್ಲಿ 300 ಎಕರೆ ಜಾಗವನ್ನ ಗುರುತಿಸಲಾಗಿದ್ದು, ನಿಯಮಾನುಸಾರ ಕ್ರಮ ಕೈಗೊಂಡು ನಾಗರಿಕ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಅವರು, ನಾನು ಮಂತ್ರಿಯಾದ ಬಳಿಕ ನಿವೇಶನ ಹಂಚಿಕೆ ವಿಚಾರದಲ್ಲಿ ನಡೆದಿದ್ದ ಬೆಳವಣಿಗೆಯಿಂದ ಮುಡಾ ಕಚೇರಿ ಗರ ಬಡಿದಂತಿತ್ತು. ಇದೀಗ ನ್ಯಾಯಾಲಯದಿಂದ ಆದೇಶಗಳು ಬಂದಿದ್ದು, ಹೊಸ ಬಡಾವಣೆ ರಚಿಸಲು ಅನುಮೋದನೆ ದೊರೆತಿದೆ.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಮಾಡಿ ಹೊಸ ಬಡಾವಣೆ ಮಾಡಲು ಅನುಮತಿ ಪಡೆದು 300 ಎಕರೆ ಸ್ಥಳ ಗುರುತಿಸುವ ಕೆಲಸವಾಗಿದೆ ಎಂದರು.

ರಾಜ್ಯ ನಗರಾಭಿವೃದ್ಧಿ ಇಲಾಖೆಯಿಂದ ಬಳ್ಳಾರಿ, ಬೀದರ್, ಚಾಮರಾಜನಗರ, ಮಂಗಳೂರು, ಕಲಬುರಗಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಕರ್ನಾಟಕ ನಗರಾಭಿವೃದ್ಧಿ ನಿವೇಶನ ಹಂಚಿಕೆ ನಿಯಮಗಳಂತೆ ಹಿಂದುಳಿದವರಿಗೆ ಶೇ.2, ಅಧಿಸೂಚಿತ ಬುಡಕಟ್ಟು ಜನಾಂಗಕ್ಕೆ ಶೇ.3ರಷ್ಟು ಅಧಿಸೂಚಿತ ಜಾತಿಗಳಿಗೆ ಶೇ.15ರಷ್ಟು ಕೇಂದ್ರ ಸಶಸ್ತ್ರ ಪಡೆಗಳ ಸೈನಿಕರಿಗೆ ಶೇ.5ರಷ್ಟು ಹಾಗೂ ಸಾರ್ವಜನಿಕರಿಗೆ ಶೇ.55ರಷ್ಟು ಮೀಸಲಾತಿಯಂತೆ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !