ಹೊಸದಿಗಂತ ವರದಿ, ಯಲ್ಲಾಪುರ:
ಪ್ರೀತಿ ನಿರಾಕರಿಸಿದ ಕಾರಣಕ್ಕೆ ಬರ್ಬರವಾಗಿ ಹತ್ಯೆಯಾಗಿರುವ ಪಟ್ಟಣದ ಕಾಳಮ್ಮನಗರದ ಹಿಂದು ಮಹಿಳೆ ರಂಜಿತಾ ಮನೆಗೆ ಭಾನುವಾರ ಸಂಜೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭೇಟಿ ನೀಡಿ, ಪಾರ್ಥಿವ ಶರೀರದ ಅಂತಿಮ ದರುಶನ ಪಡೆದರು. ಕುಟುಂಬಕ್ಕೆ ಸಾಂತ್ವನ ಹೇಳಿ, ಪಕ್ಷದ ವತಿಯಿಂದ 5 ಲಕ್ಷ ರೂ.
ಪರಿಹಾರಧನ ವಿತರಿಸಿದರು.
ನಂತರ ಮಾಧ್ಯಮವರೊಂದಿಗೆ ಮಾತನಾಡಿದ ಅವರು,ಮೃತ ರಂಜಿತಾ ಕುಟುಂಬಕ್ಕೆ 2 ಎಕರೆ ಜಮೀನು,50 ಲಕ್ಷ ರೂ ಪರಿಹಾರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಒತ್ತಾಯಿಸಿದರು.
ದಲಿತಹಿಂದೂ ಮಹಿಳೆ ಬರ್ಬರ ಹತ್ಯೆಯನ್ನು ಬಲವಾಗಿ ಖಂಡಿಸುತ್ತೇನೆ.ಮುಖ್ಯಮಂತ್ರಿಯವರಲ್ಲಿ, ಗೃಹಸಚಿವರಲ್ಲಿ ಕೇಳಿಕೊಳ್ಳುತ್ತೇನೆ ತನಿಖೆ ಸರಿಯಾದ ರೀತಿಯಲ್ಲಿ ಆಗಬೇಕು.ಲವ್ ಜಿಹಾದ ಕಾಶ್ಮೀರದಲ್ಲಿಯೇ ಆಗಬೇಕು ಅಂತಿಲ್ಲ. ಮೃತ ಮಹಿಳೆಯ ಕುಟುಂಬಕ್ಕೆ ಕನಿಷ್ಠ ಪಕ್ಷ ೫೦ಲಕ್ಷ ರೂ ಪರಿಹಾರವನ್ನು ತಕ್ಷಣ ರಾಜ್ಯ ಸರಕಾರ ಘೋಷಣೆ ಮಾಡಬೇಕು. ನಾವು ಈಗಾಗಲೇ ಪಕ್ಷದಿಂದ ೫ಲಕ್ಷ ರೂ ಪರಿಹಾರವನ್ನು ಕೊಟ್ಟಿದ್ದೇವೆ. ಮೃತಳ ೧೦ ವರ್ಷದ ಪುತ್ರನ ಶಿಕ್ಷಣದ ಜವಾಬ್ದಾರಿಯನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ವಹಿಸಿಕೊಂಡಿದ್ದಾರೆ ಎಂದರು.
ಎಂ.ಎಲ್.ಸಿ ಶಾಂತಾರಾಮ ಸಿದ್ದಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್ ಹೆಗಡೆ, ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ತಾಲೂಕಾಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ಶ್ಯಾಮಿಲಿ ಪಾಟಣಕರ್, ಚಂದ್ರಕಲಾ ಭಟ್ಟ, ಅನಂತಮೂರ್ತಿ ಹೆಗಡೆ ಇತರರಿದ್ದರು

