ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಕಿಪೀಡಿಯಾಗೆ ಪ್ರತಿಯಾಗಿ ಟೆಸ್ಲಾ ಮುಖ್ಯಸ್ಥ ವಿಶ್ವದ ನಂಬರ್ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಗ್ರೋಕಿಪೀಡಿಯಾ ತರುವುದಾಗಿ ಘೋಷಣೆ ಮಾಡಿದ್ದು ಆರಂಭಿಕ ಆವೃತ್ತಿ ಮುಂದಿನ ಎರಡು ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಗ್ರೋಕಿಪೀಡಿಯಾ ಜನರಿಗೆ ಮತ್ತು AI ಗಾಗಿ ಬಳಕೆಯ ಮೇಲೆ ಯಾವುದೇ ಮಿತಿಗಳಿಲ್ಲದೆ ವಿಶ್ವದ ಅತಿದೊಡ್ಡ, ಅತ್ಯಂತ ನಿಖರವಾದ ಜ್ಞಾನ ಮೂಲವಾಗಲಿದೆ ಎಂದಿದ್ದಾರೆ.
ಮಸ್ಕ್ ಮೊದಲಿನಿಂದಲೂ ವಿಕಿಪೀಡಿಯಾವನ್ನು ಟೀಕಿಸುತ್ತಲೇ ಬಂದಿದ್ದಾರೆ. ವಿಶ್ವಕೋಶ ಎಂದೇ ಬಿಂಬಿತವಾಗಿರುವ ವಿಕಿಪೀಡಿಯಾನ್ನು ಎಡಪಂಥೀಯರು ನಿಯಂತ್ರಿಸುತ್ತಿದ್ದು ದೇಣಿಗೆ ನೀಡಬೇಡಿ ಮಸ್ಕ್ ಬಹಿರಂಗ ಕರೆ ನೀಡಿದ್ದರು.
ವಿಕಿಪೀಡಿಯಾ ತಟಸ್ಥ ನೀತಿಯನ್ನು ಹೊಂದಿಲ್ಲ. ಇದನ್ನು ತೀವ್ರ ಎಡಪಂಥೀಯ ಕಾರ್ಯಕರ್ತರು ನಿರ್ವಹಿಸುತ್ತಿದಾರೆ. ವಿಶ್ವಕೋಶ ಪಕ್ಷಪಾತೀಯವಾಗಿ ಕೆಲಸ ಮಾಡುತ್ತಿದೆ. ತಮ್ಮ ಸಿದ್ಧಾಂತವನ್ನು ಬಳಸುವ ಪ್ರಚಾರ ಸಾಧನವಾಗಿ ಬಳಸುತ್ತಿದ್ದಾರೆ. ಇಂದು ಅನೇಕ ಎಐಗಳು ಇಂಟರ್‌ನೆಟ್‌ನಿಂದ ಮಾಹಿತಿಯನ್ನು ಪಡೆದು ಉತ್ತರ ನೀಡುತ್ತಿವೆ. ವಿಕಿಪೀಡಿಯಾದ ಉತ್ತರವನ್ನು ಬಳಸುವುದರಿಂದ ತಪ್ಪು ಮಾಹಿತಿಗಳಿಗೆ ಪ್ರಚಾರ ಸಿಗುತ್ತಿವೆ.
ಗ್ರೋಕಿಪೀಡಿಯಾವನ್ನು ಯಾವುದೇ ಕಾರ್ಯಕರ್ತರು ಅಥವಾ ರಾಜಕೀಯ ಪಕ್ಷಗಳು ನಿಯಂತ್ರಿಸುವುದಿಲ್ಲ. ಇದು ಮುಕ್ತ ಮೂಲವಾಗಿರುತ್ತದೆ ಮತ್ತು ಎಲ್ಲರಿಗೂ ಬಳಸಲು ಉಚಿತವಾಗಿರುತ್ತದೆ ಎಂದು ಮಸ್ಕ್ ಹೇಳಿದ್ದಾರೆ.