ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪ್ಪ ಏಳನೇ ಮದುವೆ ಆಗ್ತಿದಾರೆ ಪ್ಲೀಸ್ ಯಾರಾದ್ರೂ ಬಂದು ತಡೀರಿ ಎಂದು ಮಗನೊಬ್ಬ ಠಾಣೆಯ ಮೆಟ್ಟಿಲೇರಿದ ಘಟನೆ ಅಂಜನಗಢದ ಅಹ್ರೌಲಾದಲ್ಲಿ ನಡೆದಿದೆ.
ದ್ವಿತೀಯ ಪಿಯುಸಿ ಓದುತ್ತಿರುವ ಮಗ ತನ್ನ ತಂದೆಯ ಮೇಲೆಯೇ ದೂರು ನೀಡಿದ್ದಾರೆ. ಅಪ್ಪನಿಗೆ ಏನಾಗಿದೆ ಗೊತ್ತಿಲ್ಲ. ಈಗ ಏಳನೇ ಮದುವೆಯಾಗೋಕೆ ಹೊರಟಿದ್ದಾರೆ. ಅವರಿಗೆ 55 ವರ್ಷವಾಗಿದೆ. ನನ್ನಿಂದ ಅವರನ್ನು ತಡೆಯೋಕೆ ಆಗಿಲ್ಲ. ನೀವಾದ್ರೂ ಬಂದು ತಡೆಯಿರಿ ಎಂದು ಯುವಕ ಪೊಲೀಸರಿಗೆ ಮನವಿ ಮಾಡಿದ್ದಾರೆ.
ನನ್ನ ತಂದೆ ಈಗಾಗಲೇ ಆರು ಬಾರಿ ಮದುವೆಯಾಗಿದ್ದಾರೆ. ನಾನು ಅವರ ಮೂರನೇ ಪತ್ನಿಯ ಮಗ. ಎರಡು ವರ್ಷದ ಹಿಂದೆ ಅಪ್ಪ ಆರನೇ ಮದುವೆ ಆಗಿದ್ದರು. ಸ್ವಲ್ಪ ದಿನಕ್ಕೆ ಅವರ ಹೆಂಡತಿ ಮನೆ ಬಿಟ್ಟು ಹೋಗಿ ಆಸ್ತಿ ನೀಡುವಂತೆ ಕೇಳಿದ್ದಾರೆ. ಇದಕ್ಕಾಗಿ ಭೂಮಿಯನ್ನೂ ಮಾರೋಕೆ ತಯಾರಾಗಿದ್ದಾರೆ. ಹಾಗೆ ಏಳನೇ ಮದುವೆಗೂ ರೆಡಿಯಾಗಿದ್ದಾರೆ. ಈ ಎಲ್ಲದರ ಬಗ್ಗೆ ತನಿಖೆ ಮಾಡಿ ಎಂದು ಮನವಿ ಮಾಡಿದ್ದಾನೆ.



